Nothing Special   »   [go: up one dir, main page]

ವಿಷಯಕ್ಕೆ ಹೋಗು

ಬಾಯ್ಕಳಕ ಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಯ್ಕಳಕ ಹಕ್ಕಿ
Adult showing characteristic gap between mandibles
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
A. oscitans
Binomial name
Anastomus oscitans
(Boddaert, 1783)

ಬಾಯ್ಕಳಕ ಹಕ್ಕಿಭಾರತೀಯ ಉಪಖಂಡದಲ್ಲಿ ಕಂಡುಬರುವ ಕೊಕ್ಕರೆ ಜಾತಿಯ ಹಕ್ಕಿ. ನೋಡಲು ಅದು ನಮ್ಮ ಸುತ್ತಮುತ್ತಲಿನ ಬೆಳ್ಳಕ್ಕಿಗಳಂತಿದೆ. ಅದರ ಕಡ್ಡಿ ಕಡ್ಡಿ ಕಾಲ ಕೆಳಗಿನ ನೀರು ಸರಸರನೇ ಸರಿದು ಹೋಗುತ್ತಿದ್ದರೂ ಲೆಕ್ಕಿಸದೆ, ಸೆಕೆಂಡಿನ ನೂರನೆಯ ಒಂದು ಭಾಗದಷ್ಟು ವೇಗವಾಗಿ ನೀರಿನಾಳದಲ್ಲಿ ಕದಲುವ ಬೇಟೆಯನ್ನು ಗಬಕ್ಕನೇ ಹಿಡಿದು ಗಂಭೀರವಾಗಿ ನೀರು ಸಿಡಿಸುತ್ತಾ ಕಟಕ್ಕೆಂದು ಅಷ್ಟು ದೂರದವರೆಗೆ ಕೇಳಿಸುವಂತೆ,ಏಡಿ,ಶಂಕಹುಳುವನ್ನು ಅಡಿಕೆ ಕತ್ತರಿಸುವಂತೆ ಕತ್ತರಿಸುತ್ತಾ ನಿಲ್ಲುವ ಈ ಕೊಕ್ಕರೆ ಹೆಸರೇ ಬಾಯ್ಕಳಕ.ಕಾರಣ ಇದು ಬಾಯಿ ಮುಚ್ಚಿದ್ದರೂ ಮಧ್ಯದಲ್ಲಿ ತೆರೆದೇ ಇರುತ್ತದೆ.ಅಡಿಕೆ ಕತ್ತರಿಸುವ ಅಲಗಿನಂತೆ ಇದೆ ಅದರ ಕೊಕ್ಕು. ಅಂದ ಹಾಗೆ ಇದು ದೂರದ ಬರ್ಮಾ.ಇಂಡೋನೆಶಿಯ.ಥೈಲ್ಯಾಂಡ್.ಪಾಕಿಸ್ತಾನದಿ೦ದ ನಮ್ಮ ಕರಾವಳಿಗೆ ಕಾಲ್ಲಿಟ್ಟು ತನ್ನ ಬಸಿರು ಬಾಣಂತನ ಮುಗಿಸಿಕೊಂಡು ಸದ್ದಿಲ್ಲದೆ ಮೂರ್ನಾಲ್ಕು ಸಾವಿರ ಕಿ.ಮೀ. ಹಾರಿ ಹೋಗುವ ಅಪರೂಪದ ಕೊಕ್ಕರೆ ಜಾತಿಯ ಪಕ್ಷಿ. ಇದು ಜತೆಗಿರುವ ನಮ್ಮೂರ ಕೊಕ್ಕರೆಗಳ ಗುಂಪಿನಲ್ಲಿ ಇವುಗಳು ಸೇರಿಹೋಗುತ್ತವೆ.

ಜೀವಭಯ!

[ಬದಲಾಯಿಸಿ]
  1. ಬಾಯ್ಕಳಕಕ್ಕೀಗ ಜೀವ ಭಯ ಮತ್ತು ಸ೦ಥ್ರಸ್ತರಾಗುವ ಭೀತಿ ಪ್ರತಿ ಬಾರಿಯ೦ತೆ ಎದುರಾಗಿದೆ. ಕಾರಣ ಪ್ರತಿ ಬಾರಿಯೂ ನಡೆಯುತ್ತಿರುವ ಇವುಗಳ ಬೇಟೆ ಮತ್ತು ಮರಿಗಳ ಮೇಲೆ ಎರಗುವ ಹದ್ದು ಮತ್ತು ಇತರ ಪ್ರಾಣಿಗಳು.ಆದುದರಿಂದ ಪದೇಪದೇ ಜಾಗ ಬದಲಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಬಾಯ್ಕಳಕ ಈ ಬಾರಿ ಸದ್ದಿಲ್ಲದೆ ಕರಾವಳಿಯ ಹಿನ್ನೀರ ಪ್ರದೇಶದಲ್ಲಿ ಸಂತಾನೋತ್ಪತಿ ನಡೆಸಿದೆ.
  2. ಅಪ್ಪಟ್ಟ ಕೊಕ್ಕರೆ,ಆದರೆ ಕೊಕ್ಕರೆಗಿಂತ ವಿಭಿನ್ನ ಚಹರೆಯನ್ನು ಹೊಂದಿರುವ,ಸೂಕ್ಷ್ನವಾಗಿ ಗಮನಿಸಿದರೆ ಮಾತ್ರ ಕಾಣಿಸುವ ಗಾಢ ಕಪ್ಪು ವರ್ಣಗಳ ಸಂಕೀರ್ಣ ಮಿಶ್ರಣ ಈ ಬಾಯ್ಕಳಕವನ್ನು ಭಿನ್ನವಾಗಿ ನಿಲ್ಲಿಸುತ್ತದೆ. ಕಾರಣ;ಸರಿಯಾಗಿ ಭಾಗ ಮಾಡಿದಂತೆ ಇರುವ ಅದರ ಪುಕ್ಕಗಳು,ಗೇಣು ಹಾಕಿ ಏಣಿಸಿದಂತೆ ಅರ್ಧಕ್ಕೆ ಮಡಚಿಕೊಳ್ಳುವ ಕಾಲುಗಳು,ಕೊಕ್ಕಿನ ಮಧ್ಯದಲ್ಲಿ ಉಳಿದುಬಿಡುವ ಅಂತರದಿಂದ ಬಾಯ್ತೆರೆದೆ ಇರುವ ಇದರ ಭಂಗಿ,ಎಲ್ಲಕ್ಕಿಂತಲೂ ಮುಖ್ಯವಾಗಿ ದೇಹಕ್ಕಿಂತ ದೊಡ್ಡ ಬಲಶಾಲಿ ರೆಕ್ಕೆಗಳು ಮತ್ತು ಕುತ್ತಿಗೆಯವರೆಗಿನ ಮೂರು ಸೂಕ್ಶ್ಮಪದರದ ತುಪ್ಪಳಗಳು ಇದನ್ನು ಠೀವಿಯಿಂದ ಎದ್ದು ನಿಲ್ಲುವಂತೆ ಮಾಡಿವೆ.
  3. ಕೊಕ್ಕಿನ ಮಧ್ಯ ಮುಚ್ಚದೆ ಉಳಿಸಿಕೊಳ್ಳುವ ಭಾಗದ ಅಂತರವೇ ಕೊಕ್ಕರೆಯನ್ನು'ಬಾಯ್ಕಳಕ' ಎಂದು ಕರೆಯುವಂತೆ ಮಾಡಿದೆ. ಕೊಕ್ಕಿನ ಸಂದಿನಲ್ಲಿಸಿಗುವ ಕಠಿಣಾತಿ ಕಠಿಣ ವಸ್ತುಗಳು ಕೂಡ 'ಕಟ್...ಕಟ್...'ಶಬ್ದದೊಡನೆ ಮುರಿದು ಹೋಗುತ್ತವೆ. ಆಮೆಯ ಕವಚವನ್ನೂ ಕತ್ತರಿಸುವ ಶಕ್ತಿ ಇದಕ್ಕಿದೆ ಎನ್ನುವುದು ಇದರ ಹೆಗ್ಗಳಿಕೆ.
  4. ನೋಡುನೋಡುತ್ತಿದ್ದ೦ತೆ ವೈಯಾರ ಮಾಡುತ್ತಾ ಹತ್ತಿರದ ಕಂಟಿಯ ಎತ್ತರದ ಭಾಗದಲ್ಲಿ ಆಗಸಕ್ಕೆ ಮುಖ ಮಾಡಿ ನಿಲ್ಲುವ ಬಾಯ್ಕಳಕ ಇತ್ತೀಚಿನ ದಿನದಲ್ಲಿ ಶೀಘ್ರವಾಗಿ ನಶಿಸುತ್ತಿರುವ ಪಕ್ಷಿ ಪ್ರಭೇದದಲ್ಲಿ ಸೇರ್ಪಡೆಯಾಗುತ್ತಿದೆ.ಬೇಟೆಗಾಗಿ ನೀರ ಮೇಲೆ ನಿಶ್ಚಲವಾಗಿ ನಿಲ್ಲುವ,ಆಗಸದಲ್ಲಿ ಉರುಳುರುಳಿ ಬೀಳುವ ಮೋಡಿ ಮತ್ತು ವೇಗ ನೋಡಲು ಬಲು ಚಂದ.

ಕುಟುಂಬ ಯೋಜನೆ

[ಬದಲಾಯಿಸಿ]

ಎರಡಡಿ ಎತ್ತರದ,ಶಕ್ತಿಶಾಲಿ ರೆಕ್ಕೆಗಳ ಬಾಯ್ಕಳಕಕ್ಕೆ 'ಏಶಿಯನ್ ಓಪನ್ ಬಿಲ್ ಸ್ಟಾರ್ಕ್' ಎಂದು ಹೆಸರು. ಮೂಲತಃ ಎಲ್ಲ ಹಕ್ಕಿಗಳಂತೆ 'ಅನಿಮಾಲಿಯಾ' ಸಂತತಿಯ 'ಸಿಕೋನಿಡೈ' ಕುಟುಂಬಕ್ಕೆ ಸೇರುವ ಇದು 'ಸಿಖೊನಿ ಫ಼ಾರ್ಮ್ಸ್' ಸರಣಿಯಲ್ಲಿದೆ. ಸದಾಕಾಲ ಗುಂಪಿನಲ್ಲಿರುವ ಇವು ಎತ್ತರದ ಮರದಲ್ಲೇ ವಾಸಿಸುತ್ತವೆ. ಅಲ್ಲೇ ಮರದ ತೊಗಟೆ ಮತ್ತು ಎಲೆಯ ಮರೆಯಲ್ಲಿ ಅದೇ ರೀತಿಯ 'ಕ್ಯಾಮೋಪ್ಲಾಜಿಕ್' ಗೂಡು ಕಟ್ಟುವ ಕ್ರಿಯೆಯಿ೦ದಾಗಿ ಹೊರ ಜಗತ್ತಿಗೆ ಸಂತಾನೋತ್ಪತಿ ಅಷ್ಟಾಗಿ ಕಾಣ ಸಿಗುವುದಿಲ್ಲ.

ಒಮ್ಮೆಗೆ ಎರಡರಿಂದ ನಾಲ್ಕು ಮೊಟ್ಟೆಯನ್ನು ಸಾಲುಸಾಲಾಗಿ ಇರಿಸಿ ಗುಂಪು ಗೂಡಿ ಮರಿಗಳನ್ನು ಬೆಳೆಸುವ, ಕುಟುಂಬ ಪೋಶಿಸುವ ಈ ಹಕ್ಕಿಗಳಿಗೆ ಉತ್ತರ ಮತ್ತು ದಕ್ಷಿಣಭಾರತದ ಅರಿವು ಸ್ಪಷ್ಟವಾಗಿದೆ. ಕಾರಣ ಉತ್ತರಭಾರತದ ಭಾಗದಲ್ಲಿದ್ದರೆ ಜುಲೈನಿಂದ ಸೆಪ್ಟಂಬರ್ ವರೆಗೂ ದಕ್ಷಿಣ ಭಾಗದಲ್ಲಿದ್ದರೆ ಅಕ್ಟೋಬರ್ನಿಂದ ಮಾರ್ಚ್ವವರೆಗೂ ಮರಿ ಹಾಕುವ ,ಬೆಳೆಸುವ ಕಾರ್ಯದ ವ್ಯವಸ್ಥಿತ ಯೋಜನೆತನ್ನು ಹೊಂದಿವೆ.ಅಕಸ್ಮಾತ್ ಆ ವರ್ಷ ಬರಗಾಲದ ಛಾಯೆ ಇದ್ದರೆ, ನೀರಿನ ಅಭಾವ ಇದ್ದರೆ ಕುಟುಂಬ ಯೋಜನೆ ಕೈಗೊಳ್ಳುವ ಹಕ್ಕಿಗಳು ಮರಿಯನ್ನು ಮಾಡುವ ಗೋಜಿಗೆ ಹೋಗುವುದಿಲ್ಲ. ಅಂಥಾ ನಡವಳಿಕೆ ಕೇವಲ ಬಾಯ್ಕಳಕ ಗುಂಪಿನಲ್ಲಿ ಕಂಡು ಬರುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. BirdLife International (2012). "Anastomus oscitans". IUCN Red List of Threatened Species. Version 2013.2. International Union for Conservation of Nature. Retrieved 26 November 2013. {{cite web}}: Invalid |ref=harv (help)