- ಯಾರು ಶಿರಡಿಯ ನೆಲದ ಮೇಲೆ ತಮ್ಮ ಪಾದಗಳನ್ನು ಇಡುವರೋ ಅವರ ಕಷ್ಟಗಳು ಕೊನೆಗಾಣುವುವು.
- ಈ ನನ್ನ ಸಮಾಧಿಯ ಮೆಟ್ಟಿಲುಗಳನ್ನು ಹತ್ತಿದ ತಕ್ಷಣ ನಿಮ್ಮ ಎಲ್ಲಾ ದು:ಖಗಳೂ ಕೊನೆಗಾಣುವುವು.
- ಈ ಪಾರ್ಥಿವ ದೇಹವನ್ನು ತ್ಯಜಿಸಿದ ನಂತರವೂ ನಾನು ನನ್ನ ಭಕ್ತರಿಗೆ ನೆರವಾಗುವೆನು.
- ನನ್ನ ಸಮಾಧಿಯೇ ನಿಮ್ಮ ಎಲ್ಲಾ ಬಯಕೆಗಳನ್ನು ಈಡೇರಿಸುತ್ತದೆ.ಅದರ ಮೇಲೆ ಸಂಪೂರ್ಣ ನಂಬಿಕೆ ಹಾಗೂ ಅನನ್ಯ ವಿಶ್ವಾಸವನ್ನಿಡಿ.
- ನಾನು ನಿತ್ಯ ಜೀವಂತನಾಗಿರುವೆನು. ಇದನ್ನೇ ಸತ್ಯವೆಂದು ತಿಳಿಯಿರಿ. ಆಗ ನೋಡಿ. ನನ್ನ ಲೀಲೆಗಳು ತಾನಾಗಿಯೇ ನಿಮ್ಮ ಅನುಭವಕ್ಕೆ ಬರುತ್ತವೆ.
- ನನ್ನಲ್ಲಿ ಶರಣಾಗತರಾಗಿ, ನನ್ನ ರಕ್ಷಣೆಯನ್ನು ಬಯಸಿ ನನ್ನನ್ನರಸಿ ಬಂದ ಯಾರನ್ನಾದರೂ ಪಕ್ಕಕ್ಕೆ ತಳ್ಳಿದ ಉದಾಹರಣೆಯನ್ನು ತೋರಿಸಿ.
- ನೀವು ಯಾವ ತೀವ್ರತೆಯಲ್ಲಿ ನನ್ನನ್ನು ಪ್ರಾರ್ಥಿಸುತ್ತೀರೋ, ಅದೇ ತೀವ್ರತೆಯಲ್ಲಿ ನಾನು ನಿಮಗೆ ಸ್ಪಂದಿಸುವೆನು.
- ನಿಮ್ಮ ಭಾರವನ್ನು ನಾನು ಯಾವಾಗಲೂ ಹೊರುವೆನು. ಯಾವುದೇ ಅನುಮಾನವಿಲ್ಲದೇ ಇದನ್ನೇ ಪ್ರಮಾಣವೆಂದು ತಿಳಿಯಿರಿ.
- ನೀವು ನನ್ನ ಸಹಾಯವನ್ನು ಬಯಸಿದಲ್ಲಿ ಅದನ್ನು ಖಂಡಿತವಾಗಿ ಪಡೆಯುತ್ತೀರಿ.
- ಯಾರು ತಮ್ಮ ತನು-ಮನ-ಧನಗಳನ್ನು ಅರ್ಪಿಸಿ ನನ್ನಲ್ಲಿ ಒಂದಾಗುತ್ತಾರೋ, ಜೀವನಪರ್ಯಂತ ಅವರಿಗೆ ನಾನು ಋಣಿಯಾಗಿರುತ್ತೇನೆ.
- ಯಾರು "ಸಾಯಿ ಸಾಯಿ" ಎಂಬ ನಾಮೋಚ್ಛಾರಣೆ ಮಾಡುತ್ತಾ ನನ್ನ ಪಾದಗಳಿಗೆ ಭಕ್ತಿಯಿಂದ ನಮಿಸುವರೋ ಅವರನ್ನು ನಾನು ಅನುಗ್ರಹಿಸುತ್ತೇನೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ