Nothing Special   »   [go: up one dir, main page]

ವಿಷಯಕ್ಕೆ ಹೋಗು

ಬರಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Panicum miliaceum

ಬರಗು ಜಪಾನ್, ಚೀನ, ಮಧ್ಯ ಹಾಗೂ ದಕ್ಷಿಣ ರಷ್ಯ, ಆಫ್ರಿಕ, ಭಾರತ ಮತ್ತು ಅಮೆರಿಕಗಳಲ್ಲಿ ವ್ಯವಸಾಯದಲ್ಲಿರುವ ಆಹಾರಧಾನ್ಯ (ಕಾಮನ್ ಮಿಲೆಟ್, ಪ್ರೋಸೊ ಮಿಲೆಟ್ ಅಥವಾ ಹಾಗ್ ಮಿಲೆಟ್). ಸಾವೆ, ಗಿನಿ ಹುಲ್ಲು, ಸೊಂಟಿ ಹುಲ್ಲು ಮುಂತಾದವುಗಳ ಹತ್ತಿರ ಸಂಬಂಧಿ. ಪ್ಯಾನಿಕಮ್ ಮಿಲಿಯೇಸಿಯಮ್ ಇದರ ವೈಜ್ಞಾನಿಕ ಹೆಸರು.

ಕಾಡುಬಗೆಯಾಗಿ ಬರಗು ಎಲ್ಲಿಯೂ ಕಾಣದೊರೆಯದು. ಇದರಲ್ಲಿ ಎಫ್ಯೂಸಮ್ ಮತ್ತು ಕಾಂಟ್ರಾಕ್ಟಮ್ ಎಂಬ ಎರಡು ಬಗೆಗಳುಂಟು ಬರಗಿನ ಕೃಷಿ ಗೋದಿಯ ಕೃಷಿಯಷ್ಟೇ ಪ್ರಾಚೀನ ಎನ್ನಲಾಗಿದೆ. ಇದರ ತವರು ಅರೇಬಿಯ- ಈಜಿಫ್ಟ್ ಪ್ರದೇಶ ಎಂದು ಬರೆಯಲಾಗಿತ್ತು. ಆದರ ಇತ್ತೀಚಿನ ಸಂಶೋಧನೆಗಳ ಆಧಾರದಿಂದ ಇದರ ಮೂಲ ಮಧ್ಯ ಇಲ್ಲವೆ ಪೂರ್ವ ಏಷ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಭಾರತದಲ್ಲಿ ಇದನ್ನು ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳು ನಾಡುಗಳಲ್ಲಿ ಹೆಚ್ಚು ಪ್ರಮಾಣದಲ್ಲೂ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಪಂಜಾಬ್‍ಗಳಲ್ಲಿ ಕೊಂಚ ಪ್ರಮಾಣದಲ್ಲೂ ಬೆಳೆಯಲಾಗುತ್ತದೆ.

ಬರಗು ತುಂಬ ಶೀಘ್ರಗತಿಯಲ್ಲಿ ಬೆಳೆಯುವ ಪೀಕು. ಶುಷ್ಕ ಪರಿಸ್ಥಿತಿಯಿದ್ದರೂ ಚಿನ್ನಾಗಿಯೇ ಬೆಳೆಯಬಲ್ಲದು. ಅಂತೆಯೇ ಇದರ ಕೃಷಿಗೆ ಉತ್ತಮವಾದ ಭೂಮಿಯೇ ಬೇಕೆಂದಿಲ್ಲ (ತುಂಬ ಮರಳಿನ ಭೂಮಿ ಬಿಟ್ಟು). ಇದನ್ನು ಮೈದಾನ ಸೀಮೆಯಲ್ಲಿ ಮಾತ್ರವಲ್ಲದೆ 2700 ಮೀ, ಎತ್ತರದ ವರೆಗಿನ ಪ್ರದೇಶಗಳಲ್ಲೂ ಕೃಷಿ ಮಾಡಬಹುದು. ಇವೆಲ್ಲ ಕಾರಣಗಳಿಂದಾಗಿ ಬೇರಾವುದೇ ಆಹಾಧಾನ್ಯವನ್ನು ಬೆಳೆಯಲಾಗದಂಥ ಕೀಳುಬಗೆಯ ಭೂಮಿಯಲ್ಲಿ (ಸಾಮಾನ್ಯವಾಗಿ ಕೆಂಪುಗೋಡು ಇಲ್ಲವೆ ಮರಳು ಮಿತ್ರಿತ ಗೊಡು ಭೂಮಿ) ಬರಗನ್ನು ಬೇಸಾಯ ಮಾಡಲಾಗುತ್ತಿದೆ. ಹಾಗೆಯೇ ಆಪತ್ಕಾಲದ ಬೆಳೆಯಾಗಿ, ಮಳೆ ತಡವಾಗಿ ಬಿದ್ದು ನೆಲವನ್ನು ಉತ್ಕøಷ್ಟವಾಗಿ ಹದಗೊಳಿಸುವುದು ಸಾಧ್ಯವಾಗದಾಗ ಇದನ್ನು ಬೆಳೆಸುವುದುಂಟು. ಇದನ್ನು ನೀರಾವರಿ ಪೀಕಾಗಿ ಬೆಳೆಯುವುದೂ ಉಂಟು. ಇದನ್ನು ಹಿಂಗಾರಿ ಬೆಳೆಯಗಿ ಕೃಷಿಮಾಡುವುದೇ ವಾಡಿಕೆ. ಸಾಲುವರಿ ಇಲ್ಲವೆ ಚೆಲ್ಲುವರಿ ವಿಧಾನಗಳಿಂದ ಬಿತ್ತನೆ ಮಾಡಲಾಗುತ್ತದೆ.

ಬೀಜಬಿತ್ತನೆಯಾದ 70-90 ದಿವಸಗಳಲ್ಲಿ ಪೈರು ಕುಯ್ಲಿಗೆ ಸಿದ್ಧವಾಗುತ್ತದೆ. ಆಗ ಗಿಡಗಳನ್ನು ಬೇರುಸಹಿತ ಕಿತ್ತು, ತತ್‍ಕ್ಷಣವೇ ತೆನೆಬಡಿಯುವುದರ ಮೂಲಕ ಅಥವಾ ಎತ್ತುಗಳಿಂದ ತುಳಿಸುವುದರ ಮೂಲಕ ಒಕ್ಕಲಾಗುತ್ತದೆ. ಇಳಿವರಿ ಹೆಕ್ಟೇರಿಗೆ 600 ಕೆಜಿ ಯಿಂದ 1700 ಕೆಜಿ ವರೆಗೆ ವ್ಯತ್ಯಾಸವಾಗುವುದು.

ಬರಗು ಒಳ್ಳೆಯ ಆಹಾರ, ಇದನ್ನು ಅಕ್ಕಿಯಂತೆ ಬೇಯಿಸಿ ಅನ್ನಮಾಡಿ ಸೇವಿಸುವುದಲ್ಲದೆ, ಇದರ ಹಿಟ್ಟಿನಿಂದ ರೊಟ್ಟಿಮಾಡಿ ತಿನ್ನುವುದೂ ಉಂಟು. ಇದನ್ನು ಗಂಜಿ ರೂಪದಲ್ಲಿ, ಬ್ರೆಡ್ ರೂಪದಲ್ಲಿ ತಿನ್ನಬಹುದು. ಇಥಿಯೋಪಿಯದಲ್ಲಿ ಇದರಿಂದ ಒಂದು ಬಗೆಯ ಮಾದಕ ಪಾನೀಯವನ್ನು ತಯಾರಿಸುವರು. ಅಮೆರಿಕದಲ್ಲಿ ಇದು ಹಂದಿಗಳಿಗೆ ಒಳ್ಳೆಯ ತಿನಿಸೆಂದು ಪ್ರಸಿದ್ಧವಾಗಿದೆ.

ಬರಗು ದನಗಳಿಗೆ ಕುದುರೆಗಳಿಗೆ ಒಳ್ಳೆಯ ಮೇವೂ ಹೌದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬರಗು&oldid=1222897" ಇಂದ ಪಡೆಯಲ್ಪಟ್ಟಿದೆ