Nothing Special   »   [go: up one dir, main page]

ವಿಷಯಕ್ಕೆ ಹೋಗು

ಬಂಗೀ ಜಿಗಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಂಗೀ ಜಿಗಿತ ವು (ಇದನ್ನು "ಬಂಗಿ" ಜಿಗಿತ ಎಂದೂ ಉಚ್ಚರಿಸಲಾಗುತ್ತದೆ)[][] ಒಂದು ಸಾಹಸ ಚಟುವಟಿಕೆಯಾಗಿದ್ದು, ಸ್ಥಿತಿಸ್ಥಾಪಕ ಗುಣವುಳ್ಳ ಒಂದು ದೊಡ್ಡದಾದ ಹಗ್ಗಕ್ಕೆ ಕಟ್ಟಿಕೊಂಡು ಒಂದು ಎತ್ತರವಾದ ಕಟ್ಟಡ ಅಥವಾ ರಚನೆಯಿಂದ ಜಿಗಿಯುವುದನ್ನು ಇದು ಒಳಗೊಂಡಿರುತ್ತದೆ. ಎತ್ತರವಾದ ರಚನೆಯು ಸಾಮಾನ್ಯವಾಗಿ ಒಂದು ಕಟ್ಟಡ, ಸೇತುವೆ ಅಥವಾ ಕ್ರೇನಿನಂಥ ಒಂದು ನೆಲೆಗೊಳಿಸಿದ ಅಥವಾ ಸ್ಥಾಯಿಯಾಗಿರುವ ವಸ್ತುವಾಗಿರುತ್ತದೆ; ಆದರೆ, ನೆಲದ ಮಟ್ಟದಿಂದ ಮೇಲಕ್ಕೆ ತೂಗಾಡುವ ಸಾಮರ್ಥ್ಯವನ್ನು ಹೊಂದಿರುವ, ಒಂದು ಬಿಸಿ-ಗಾಳಿಯ-ಬಲೂನು ಅಥವಾ ಹೆಲಿಕಾಪ್ಟರ್‌‌‌‌ನಂಥ ಒಂದು ಚಲಿಸಬಲ್ಲ ವಸ್ತುವಿನಿಂದಲೂ ಜಿಗಿತವನ್ನು ಕೈಗೊಳ್ಳುವುದು ಸಾಧ್ಯವಿದೆ. ಹಿಂಪುಟಿತಗಳಿಂದ ಸಿಗುವಷ್ಟೇ ಪ್ರಮಾಣದಲ್ಲಿ ಮುಕ್ತ-ಜಿಗಿತದಿಂದಲೂ ರೋಮಾಂಚನವು ಸಿಗುತ್ತದೆ.[] ವ್ಯಕ್ತಿಯೋರ್ವನು ಜಿಗಿದಾಗ, ಹಗ್ಗವು ಹಿಗ್ಗಿಸಲ್ಪಡುತ್ತದೆ ಮತ್ತು ಹಗ್ಗವು ಕ್ಷಿಪ್ರವಾಗಿ ಹಿಂದಕ್ಕೆ ಚಲಿಸಿದಾಗ ಜಿಗಿತಗಾರನು ಮತ್ತೆ ಮೇಲ್ಮುಖವಾಗಿ ಹಾರುತ್ತಾನೆ ಹಾಗೂ ಎಲ್ಲಾ ಶಕ್ತಿಯು ಸಂಪೂರ್ಣವಾಗಿ ಕರಗುವವರೆಗೂ ಮೇಲಕ್ಕೆ ಮತ್ತು ಕೆಳಕ್ಕೆ ಅವನು ತೂಗಾಡುವುದನ್ನು ಮುಂದುವರಿಸುತ್ತಲೇ ಇರುತ್ತಾನೆ.

2007ರ ಏಪ್ರಿಲ್‌ನಲ್ಲಿ ನ್ಯೂಝಿಲೆಂಡ್‌ನ ಕ್ವೀನ್ಸ್‌ಟೌನ್‌ನಲ್ಲಿನ ಕವಾರೌ ಸೇತುವೆಯಲ್ಲಿ ಜಿಗಿತ.
ಫ್ರಾನ್ಸ್‌ನ ನಾರ್ಮ್ಯಾಂಡಿಯಲ್ಲಿನ ಬಂಗೀ ಜಿಗಿತ (ಸೌಲ್ಯೂವ್ರೆ ವಯಾಡಕ್ಟ್‌)
ಕ್ವೀನ್ಸ್‌ಲೆಂಡ್‌ನ ಕೇರ್ನ್ಸ್‌ನಲ್ಲಿನ AJ ಹ್ಯಾಕೆಟ್‌ ಬಂಗಿ ಗೋಪುರದ ತುದಿಯಿಂದ ಕಾಣುವ ನೋಟ
ಕವಾರೌ ಸೇತುವೆಯ ಬಳಿಯಲ್ಲಿನ ಬಂಗೀ

ಇತಿಹಾಸ

[ಬದಲಾಯಿಸಿ]
  • "ಬಂಗೀ" (pronounced /ˈbʌndʒiː/) ಎಂಬ ಪದವು ಇಂಗ್ಲಂಡಿನ ನೈಋತ್ಯ ಭಾಗದ ಉಪಭಾಷೆಯಿಂದ ಹುಟ್ಟಿಕೊಂಡಿದ್ದು, "ದಪ್ಪಗೆ ಮತ್ತು ದಡೂತಿಯಾಗಿರುವ ಯಾವುದಾದರೂ" ಎಂಬ ಅರ್ಥವನ್ನು ಅದು ಕೊಡುತ್ತದೆ, ಎಂದು ಜೇಮ್ಸ್‌ ಜೆನ್ನಿಂಗ್ಸ್‌ ಎಂಬಾತ 1825ರಲ್ಲಿ ಪ್ರಕಟಗೊಂಡ "ಅಬ್ಸರ್ವೇಷನ್ಸ್‌ ಆಫ್‌ ಸಮ್‌ ಆಫ್‌ ದಿ ಡಯಲೆಕ್ಟ್ಸ್‌ ಇನ್‌ ದಿ ವೆಸ್ಟ್‌ ಆಫ್‌ ಇಂಗ್ಲಂಡ್‌" ಎಂಬ ತನ್ನ ಪುಸ್ತಕದಲ್ಲಿ ವ್ಯಾಖ್ಯಾನಿಸಿದ್ದಾನೆ. 1930ರ ಸುಮಾರಿಗೆ ರಬ್ಬರ್‌ನಿಂದ ಮಾಡಲಾದ ಒಂದು ಅಳಿಸಿಹಾಕುವ ಸಾಧನಕ್ಕೆ ಈ ಹೆಸರನ್ನು ಬಳಸಲಾಯಿತು. A J ಹ್ಯಾಕೆಟ್‌‌‌ನಿಂದ ಬಳಸಲಾಗಿರುವಂತೆ, ಬಂಗಿ ಎಂಬ ಪದವು "ಇಲಾಸ್ಟಿಕ್‌ ಪಟ್ಟಿಯೊಂದಕ್ಕಾಗಿರುವ ಒಂದು ಕಿವಿ (ನ್ಯೂಜಿಲೆಂಡಿನ) ಪರಿಭಾಷೆ" ಎಂದು ಹೇಳಲಾಗುತ್ತದೆ.[] ಬಂಗೀ ಹಗ್ಗಗಳು ಎಂಬ ಸಾರ್ವತ್ರಿಕ ಹೆಸರಿನ ಅಡಿಯಲ್ಲಿ, ಎರಡೂ ತುದಿಗಳಲ್ಲಿ ಕೊಕ್ಕೆಗಳನ್ನು ಹೊಂದಿರುವ ಬಟ್ಟೆಯಿಂದಾವೃತವಾದ ರಬ್ಬರ್‌ ಹಗ್ಗಗಳು ದಶಕಗಳಿಂದಲೂ ಲಭ್ಯವಿದ್ದವು.
  • 1950ರ ದಶಕದಲ್ಲಿ, ಡೇವಿಡ್‌ ಅಟೆನ್‌ಬರೋ ಮತ್ತು BBCಯ ಒಂದು ಚಲನಚಿತ್ರ ತಂಡವು, ವನುವಾಟುವಿನಲ್ಲಿನ ಪೆಂಟೆಕೋಸ್ಟ್‌ ದ್ವೀಪದ "ಭೂ ಜಿಗಿತಗಾರರ" ಕಚ್ಚಾ-ಚಿತ್ರಣಗಳನ್ನು ಮರಳಿ ತಂದಿತು. ಯುವ ಪುರುಷರು ತಮ್ಮ ಧೈರ್ಯದ ಹಾಗೂ ತಾವು ಗಂಡಸುತನದ ಸ್ಥಿತಿಗೆ ತಲುಪಿರುವುದರ ಒಂದು ಪರೀಕ್ಷಾರ್ಥವಾಗಿ, ತಮ್ಮ ಕಣಕಾಲುಗಳಿಗೆ ಬಳ್ಳಿಗಳನ್ನು ಕಟ್ಟಿಕೊಂಡು ಎತ್ತರದಲ್ಲಿರುವ ಮರದ ವೇದಿಕೆಗಳಿಂದ ಜಿಗಿಯುತ್ತಿದ್ದುದನ್ನು ಈ ಕಚ್ಚಾ-ಚಿತ್ರಣಗಳು ಒಳಗೊಂಡಿದ್ದವು.[]
  • ಬೀಳುವಿಕೆಗೆ ಸಂಬಂಧಿಸಿದಂತೆ ಹೆಚ್ಚು ನಿಧಾನವಾಗಿರುವ ಗತಿಯನ್ನು ಒಳಗೊಂಡಿರುವ ಇದೇ ಬಗೆಯ ಅಭ್ಯಾಸವೊಂದು, ಮಧ್ಯ ಮೆಕ್ಸಿಕೊದ 'ಪ್ಯಾಪಂಟ್ಲಾ ಫ್ಲೈಯರ್ಸ್‌' ಅಥವಾ ಡಾಂಝಾ ಡೆ ಲೊಸ್‌ ವೊಲಡೋರ್ಸ್‌ ಡೆ ಪ್ಯಾಪಂಟ್ಲಾ ಎಂಬ ವಿಧಾನವಾಗಿ ಆಚರಿಸಲ್ಪಡುತ್ತಿದ್ದು, ಈ ಸಂಪ್ರದಾಯದ ಮೂಲಗಳು ಆಜ್‌ಟೆಕ್‌ ಮೂಲಜನಾಂಗಗಳ ದಿನಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. "ಅತ್ಯುತ್ತಮವಾದ ರಬ್ಬರ್‌"ನಿಂದ ಮಾಡಲ್ಪಟ್ಟಿರುವ ಒಂದು ಕೇಬಲ್‌ನಿಂದ ತೂಗಾಡಿಸಲ್ಪಟ್ಟ ಒಂದು "ಕಾರನ್ನು" ಬೀಳಿಸುವ ವ್ಯವಸ್ಥೆಯೊಂದನ್ನು ಒಳಗೊಂಡಿರುವ 4,000 ಅಡಿಗಳಷ್ಟು ಎತ್ತರದ ಒಂದು ಗೋಪುರದ ನಿರ್ಮಾಣವನ್ನು 1892-1893ರ ಚಿಕಾಗೊ ವರ್ಲ್ಡ್‌ ಫೇರ್‌ಗಾಗಿ ಪ್ರಸ್ತಾವಿಸಲಾಯಿತು.
  • ಇನ್ನೂರು ಜನರು ಕೂರುವ ವ್ಯವಸ್ಥೆಯನ್ನು ಒಳಗೊಂಡಿದ್ದ ಈ ಕಾರನ್ನು ಗೋಪುರದ ಮೇಲಿನ ವೇದಿಕೆಯೊಂದರಿಂದ ಬಲವಾಗಿ ತಳ್ಳುವುದು ಹಾಗೂ ಆಮೇಲೆ ನಿಲುಗಡೆಯೊಂದಕ್ಕೆ ಅದನ್ನು ಪುಟಿಸುವುದು ಈ ಯೋಜನೆಯಲ್ಲಿ ಸೇರಿತ್ತು. ಸುರಕ್ಷತೆಯ ದೃಷ್ಟಿಯಿಂದ ಕೆಳಗಿರುವ ನೆಲವನ್ನು "ಎಂಟು ಅಡಿಯಷ್ಟು ಪ್ರಮಾಣದ ಹಕ್ಕಿಯ ಗರಿಗಳ ಮೆತ್ತೆಯಿಂದ ಹೊದಿಸಿ ಮುಚ್ಚುಬೇಕು" ಎಂದು ಇದರ ವಿನ್ಯಾಸಕ ಎಂಜಿನಿಯರ್‌ ಸಲಹೆ ನೀಡಿದ. ಆದರೆ ಸದರಿ ಪ್ರಸ್ತಾವವು ಮೇಳದ ಸಂಘಟಕರಿಂದ ತಿರಸ್ಕರಿಸಿಸಲ್ಪಟ್ಟಿತು.[] ಮೊಟ್ಟಮೊದಲ ಆಧುನಿಕ ಬಂಗೀ ಜಿಗಿತಗಳು 1979ರ ಏಪ್ರಿಲ್‌ 1ರಂದು, ಬ್ರಿಸ್ಟಲ್‌ನಲ್ಲಿನ 250-ಅಡಿಯ ಕ್ಲಿಫ್ಟನ್‌ ತೂಗು ಸೇತುವೆಯಿಂದ ಮಾಡಲ್ಪಟ್ಟವು. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಡೇಂಜರಸ್‌ ಸ್ಪೋರ್ಟ್ಸ್‌ ಕ್ಲಬ್‌‌‌ನ ಡೇವಿಡ್‌ ಕಿರ್ಕ್‌, ಕ್ರಿಸ್‌ ಬೇಕರ್‌, ಸೈಮನ್‌ ಕೀಲಿಂಗ್‌, ಟಿಮ್‌ ಹಂಟ್‌ ಹಾಗೂ ಅಲನ್‌ ವೆಸ್ಟನ್‌ ಈ ಜಿಗಿತಗಳಲ್ಲಿ ಪಾಲ್ಗೊಂಡಿದ್ದರು.[] ಇದು ನಡೆದ ನಂತರ ಜಿಗಿತಗಾರರನ್ನು ಬಂಧಿಸಲಾಯಿತಾದರೂ, USನಲ್ಲಿನ ಗೋಲ್ಡನ್‌ ಗೇಟ್‌ ಮತ್ತು ರಾಯಲ್‌ ಗಾರ್ಜ್‌ ಸೇತುವೆಗಳಿಂದ ಮಾಡಿದ ಜಿಗಿತಗಳೊಂದಿಗೆ (ಈ ಕೊನೆಯ ಜಿಗಿತದ ಪ್ರಾಯೋಜಕತ್ವ ಹಾಗೂ ದೂರದರ್ಶನ ಪ್ರಸಾರದ ಹೊಣೆಗಾರಿಕೆಯನ್ನು ದಟ್ಸ್‌ ಇನ್‌ಕ್ರೆಡಿಬಲ್‌ ಎಂಬ ಅಮೆರಿಕಾದ ಕಾರ್ಯಕ್ರಮವು ವಹಿಸಿಕೊಂಡಿತ್ತು) ತಮ್ಮ ಜಿಗಿತಕಾರ್ಯವನ್ನು ಅವರು ಮುಂದುವರೆಸುವ ಮೂಲಕ, ಈ ಚಟುವಟಿಕೆಯ ಪರಿಕಲ್ಪನೆಯನ್ನು ವಿಶ್ವಾದ್ಯಂತ ಹಬ್ಬಿಸಿದರು.
  • 1982ರ ವೇಳೆಗೆ, ಚಲಿಸುವ ಕ್ರೇನುಗಳು ಹಾಗೂ ಬಿಸಿಗಾಳಿಯ ಬಲೂನುಗಳಿಂದ ಜಿಗಿಯುವುದನ್ನು ಅವರು ರೂಢಿಸಿ ಕೊಂಡಿದ್ದರು. ವಾಣಿಜ್ಯ ಸ್ವರೂಪದ ಬಂಗೀ ಜಿಗಿತವು ನ್ಯೂಝಿಲೆಂಡ್‌‌ಗೆ ಸೇರಿದ A J ಹ್ಯಾಕೆಟ್‌‌‌ನೊಂದಿಗೆ ಪ್ರಾರಂಭವಾಯಿತು. ಈತ 1986ರಲ್ಲಿ ಆಕ್ಲೆಂಡ್‌‌‌ನ ಗ್ರೀನ್‌ಹೈಟಿ ಸೇತುವೆಯಿಂದ ತನ್ನ ಮೊದಲ ಜಿಗಿತವನ್ನು ಕೈಗೊಂಡ.[] ನಂತರ ಬಂದ ವರ್ಷಗಳ ಅವಧಿಯಲ್ಲಿ ಸೇತುವೆಗಳು ಹಾಗೂ ಇತರ ರಚನೆಗಳಿಂದ (ಐಫೆಲ್‌ ಗೋಪುರವೂ ಸೇರಿದಂತೆ) ಅನೇಕ ಜಿಗಿತಗಳನ್ನು ಹ್ಯಾಕೆಟ್‌ ಕೈಗೊಂಡು, ಸದರಿ ಕ್ರೀಡೆಯಲ್ಲಿ ಸಾರ್ವಜನಿಕರು ಆಸಕ್ತಿಯನ್ನು ತಳೆಯುವಂತೆ ಮಾಡಿದ.
  • ಅಷ್ಟೇ ಅಲ್ಲ, ನ್ಯೂಝಿಲೆಂಡ್‌‌ಸೌತ್‌ ಐಲೆಂಡ್‌‌ನಲ್ಲಿರುವ ಕ್ವೀನ್ಸ್‌ಟೌನ್‌‌ನಲ್ಲಿ ಕವಾರೌ ಬ್ರಿಡ್ಜ್‌ ಬಂಗಿ ಎಂಬ ಹೆಸರಿನ ವಿಶ್ವದ ಮೊಟ್ಟಮೊದಲ ಕಾಯಮ್ಮಾದ ವಾಣಿಜ್ಯ ಸ್ವರೂಪದ ಬಂಗೀ ತಾಣವನ್ನು ಹ್ಯಾಕೆಟ್‌ ಪ್ರಾರಂಭಿಸಿದ.[] ಹಲವಾರು ದೇಶಗಳಲ್ಲಿ ವಾಣಿಜ್ಯಸಂಸ್ಥೆಗಳನ್ನು ಪ್ರಾರಂಭಿಸುವುದರೊಂದಿಗೆ, ಅತ್ಯಂತ ದೊಡ್ಡ ವಾಣಿಜ್ಯೋದ್ದೇಶದ ನಿರ್ವಾಹಕರ ಪೈಕಿ ಒಬ್ಬನಾಗಿ ಹ್ಯಾಕೆಟ್‌ ಉಳಿದುಕೊಂಡಿದ್ದಾನೆ.

ಒಂದು ಅತ್ಯಂತ ಎತ್ತರದ ಸ್ಥಳದಿಂದ ಜಿಗಿಯುವುದರಲ್ಲಿ ಅಂತರ್ಗತವಾಗಿರುವ ಅಪಾಯದ ಹೊರತಾಗಿಯೂ, 1980ರಿಂದೀಚೆಗೆ ಹಲವಾರು ಲಕ್ಷಗಟ್ಟಲೆ ಯಶಸ್ವೀ ಜಿಗಿತಗಳು ನಡೆದಿವೆ.

  • ಪ್ರತಿಯೊಂದು ಜಿಗಿತಕ್ಕೆ ಸಂಬಂಧಪಟ್ಟಂತೆಯೂ ಲೆಕ್ಕಾಚಾರಗಳನ್ನು ಹಾಗೂ ಅಳವಡಿಕೆಗಳನ್ನು ಎರಡೆರಡು ಬಾರಿ ಪರಿಶೀಲಿಸುವಂಥ, ಜಿಗಿತಗಳನ್ನು ನಿಯಂತ್ರಿಸುವ ಗುಣಮಟ್ಟಗಳು ಹಾಗೂ ಮಾಗದರ್ಶಿ ಸೂತ್ರಗಳನ್ನು ಬಂಗೀ ನಿರ್ವಹಣೆಗಾರರು ಅತಿ ಕಟ್ಟುನಿಟ್ಟಿನಿಂದ ದೃಢೀಕರಿಸಿ ಕೊಳ್ಳು ವುದೇ ಇದಕ್ಕೆ ಕಾರಣವೆನ್ನಬಹುದು. ಇಷ್ಟಾಗಿಯೂ, ಯಾವುದೇ ಕ್ರೀಡೆಯಲ್ಲಿ ಕಂಡುಬರುವಂತೆ ಇಲ್ಲಿಯೂ ಗಾಯಗಳು ಉಂಟಾಗಬಹುದು (ಕೆಳಗೆ ನೋಡಿ), ಮತ್ತು ಅಪಮೃತ್ಯುಗಳು ಸಂಭವಿಸಿರುವ ಉದಾಹರಣೆಗಳೂ ಇಲ್ಲಿವೆ. ತೀರಾ ಉದ್ದವಾಗಿರುವ ಹಗ್ಗವೊಂದನ್ನು ಬಳಸುವುದು ಅಪ ಮೃತ್ಯುವಿನ ಪ್ರಕರಣಗಳಲ್ಲಿನ ಒಂದು ಅತ್ಯಂತ ಸಾಮಾನ್ಯ ತಪ್ಪು ಎನ್ನಬಹುದು. ಜಿಗಿತದ ವೇದಿಕೆಯ ಎತ್ತರಕ್ಕಿಂತ ಹಗ್ಗವು ಉದ್ದವು ಗಣನೀಯ ಪ್ರಮಾಣದಲ್ಲಿ ಮೊಟಕಾಗಿರಬೇಕು. ಹೀಗಿದ್ದಾಗಲೇ ತನ್ನ ಹಿಗ್ಗಿಸುವಿಕೆಗೆ ಅವಕಾಶ ಕಲ್ಪಿಸಲು ಅದಕ್ಕೆ ಸಾಧ್ಯವಾಗುತ್ತದೆ.
  • ಹಗ್ಗವು ತನ್ನ ಸ್ವಾಭಾವಿಕ ಉದ್ದವನ್ನು ತಲುಪಿದಾಗ, ಜಿಗಿತಗಾರನು ಒಂದೋ ವೇಗವನ್ನು ತಗ್ಗಿಸಲು ಪ್ರಾರಂಭಿಸುತ್ತಾನೆ ಇಲ್ಲವೇ ಅವರೋಹಣದ ಅಥವಾ ಇಳಿಯುವಿಕೆಯ ವೇಗವನ್ನು ಅವಲಂಬಿಸಿ ವೇಗವನ್ನು ಹೆಚ್ಚಿಸುತ್ತಾ ಹೋಗುತ್ತಾನೆ. ಒಂದು ಗಣನೀಯ ಪ್ರಮಾಣದ ಅಳತೆಗೆ ಹಗ್ಗದ ಹಿಗ್ಗುವಿಕೆಯು ತಲುಪುವವರೆಗೂ ಕೆಲವರು ನಿಧಾನಗೊಳಿಸುವುದನ್ನು ಇನ್ನೂ ಶುರುಮಾಡದೆಯೇ ಇರಬಹುದು, ಏಕೆಂದರೆ ಸ್ವಾಭಾವಿಕ ಉದ್ದದಲ್ಲಿರುವಾಗ ವಿಕಾರಗೊಳ್ಳುವಿಕೆಯೆಡೆಗಿನ ಹಗ್ಗದ ಪ್ರತಿರೋಧಕತೆಯು ಶೂನ್ಯಮಟ್ಟದಲ್ಲಿರುತ್ತದೆ, ಮತ್ತು ಕೆಲವೊಮ್ಮೆ ಜಿಗಿತಗಾರರ ತೂಕಕ್ಕೆ ಸಮ ನಾಗಿರುವ ಮಟ್ಟಕ್ಕೆ ಬರಲು ಸಮಯವನ್ನು ತೆಗೆದುಕೊಂಡ ನಂತರ ಇದು ಕ್ರಮೇಣವಾಗಿ ಕಂಡುಬರುತ್ತದೆ. ಇದನ್ನೂ ನೋಡಿ: ಬಂಗೀ ಹಗ್ಗಗಳು ಮತ್ತು ಸ್ಪ್ರಿಂಗ್‌-ರೀತಿಯ ಇತರ ವಸ್ತುಗಳನ್ನು ವಿಕಾರಗೊಳಿಸಲು ಅಗತ್ಯವಿರುವ ಸ್ಥಿತಿಸ್ಥಾಪಕ ಸ್ಥಿರತೆ ಅಥವಾ ಸ್ಥಿರಾಂಕ ಮತ್ತು ಬಲದ ಒಂದು ಚರ್ಚೆಗಾಗಿರುವ ಪ್ರಚ್ಛನ್ನ ಶಕ್ತಿ.
ಝಾಂಬಿಯಾ/ಝಿಂಬಾಬ್ವೆಯಲ್ಲಿನ ವಿಕ್ಟೋರಿಯಾ ಜಲಪಾತದ ಸೇತುವೆಯ ಆಚೆಗಿನ ಬಂಗೀ ಜಿಗಿತ
  • ಬಂಗೀ ಜಿಗಿತದಲ್ಲಿ ಮೊದಲು ಬಳಕೆಯಾದ, ಮತ್ತು ಅನೇಕ ವ್ಯಾಪಾರೀ ನಿರ್ವಹಣೆಗಾರರಿಂದ ಈಗಲೂ ಬಳಸಲ್ಪಡುತ್ತಿರುವ ಸ್ಥಿತಿಸ್ಥಾಪಕ ಹಗ್ಗವು ಕಾರ್ಖಾನೆ-ನಿರ್ಮಿತ ಹೆಣೆಯಲ್ಪಟ್ಟ ಬಿರುಗೂದಲಿನ ಹಗ್ಗವಾಗಿದೆ. ಒಂದು ಗಡುಸಾದ ಹೊರಹೊಂದಿಕೆಯೊಳಗೆ ಸೇರಿಸಲ್ಪಟ್ಟಿರುವ ಅನೇಕ ಲ್ಯಾಟೆಕ್ಸ್‌ ಎಳೆಗಳನ್ನು ಇದು ಒಳಗೊಂಡಿರುತ್ತದೆ. ಲ್ಯಾಟೆಕ್ಸ್‌ ಎಳೆಗಳು ಪೂರ್ವಭಾವಿ-ಒತ್ತಡಕ್ಕೆ ಒಳಗಾದಾಗ, ಹೊರಗಿನ ಹೊದಿಕೆಯನ್ನು ಲೇಪಿಸಬಹುದಾಗಿದೆ. ಇದರಿಂದಾಗಿ ಹಿಗ್ಗುವಿಕೆ ಅಥವಾ ವಿಸ್ತರಿಸುವಿಕೆಯೆಡೆಗಿನ ಹಗ್ಗದ ನಿರೋಧಕ ಶಕ್ತಿಯು, ಹಗ್ಗದ ಸ್ವಾಭಾವಿಕ ಉದ್ದದ ಮಟ್ಟದಲ್ಲಿ ಆಗಲೇ ಗಣನೀಯ ಪ್ರಮಾಣದಲ್ಲಿರುತ್ತದೆ. ಇದು ಒಂದು ಗಡುಸಾದ, ತೀಕ್ಷ್ಣವಾದ ಪುಟಿಯುವಿಕೆಯನ್ನು ನೀಡುತ್ತದೆ. ಹೆಣೆಯಲ್ಪಟ್ಟ ಹೊದಿಕೆಯೂ ಸಹ ಗಣನೀಯ ಪ್ರಮಾಣದ ಬಾಳಿಕೆಯ ಪ್ರಯೋಜನಗಳನ್ನು ಒದಗಿಸುತ್ತದೆ.
  • A J ಹ್ಯಾಕೆಟ್‌ ಮತ್ತು ದಕ್ಷಿಣಾರ್ಧ ಗೋಳದ ಬಹುಪಾಲು ನಿರ್ವಾಹಕರನ್ನು ಒಳಗೊಂಡಂತೆ ಇತರ ನಿರ್ವಾಹಕರು, ಒಡ್ಡಲ್ಪಟ್ಟಿರುವ ಲ್ಯಾಟೆಕ್ಸ್‌ ಎಳೆಗಳನ್ನು ಹೊಂದಿದ ಹೆಣೆದಿರದ ಹಗ್ಗಗಳನ್ನು ಬಳಸುತ್ತಾರೆ (ಬಲಭಾಗದಲ್ಲಿ ಇದನ್ನು ಚಿತ್ರಿಸಲಾಗಿದೆ). ಇವು ಒಂದು ನವಿರಾದ, ದೀರ್ಘವಾದ ಪುಟಿತವನ್ನು ಕೊಡುತ್ತವೆ ಮತ್ತು ಇವನ್ನು ಮನೆಯಲ್ಲೇ ತಯಾರಿಸಬಹುದಾಗಿದೆ.ಒಂದು ಸರಳವಾದ ಕಣಕಾಲು ಅಳವಡಿಕೆಯನ್ನು ಮಾತ್ರವೇ ಬಳಸುವಲ್ಲಿ ಒಂದು ನಿರ್ದಿಷ್ಟವಾದ ಉತ್ತಮ ಅಭಿರುಚಿ ಅಥವಾ ಉತ್ಕೃಷ್ಟತೆ ಇದೆಯಾದರೂ, ಸ್ಪರ್ಧಿಗಳು ಸಂಪರ್ಕ ಕಡಿದುಕೊಳ್ಳುವಂತಾಗುವಂಥ ಸನ್ನಿವೇಶಗಳನ್ನು ಒಳಗೊಂಡ ಅಪಘಾತಗಳ ಕಾರಣದಿಂದಾಗಿ ಅನೇಕ ವ್ಯಾಪಾರೀ ನಿರ್ವಾಹಕರು ದೇಹಕ್ಕೆ ಕಟ್ಟುವ ಪಟ್ಟಿಯಂಥ ಸಾಧನವೊಂದನ್ನು ಬಳಸುವಂತಾಯಿತು.
  • ಇದನ್ನು ಕೇವಲ ಕಣಕಾಲು ಅಳವಡಿಕೆಯೊಂದಕ್ಕಾಗಿರುವ ಒಂದು ಮೀಸಲು ವ್ಯವಸ್ಥೆಯಾಗಿ ಮಾತ್ರವೇ ಬಳಸಲಾಗುತ್ತದೆ. ಧುಮುಕುಕೊಡೆ (ಪ್ಯಾರಷೂಟ್‌) ಉಪಕರಣಕ್ಕಿಂತ ಹೆಚ್ಚಾಗಿ, ಹತ್ತಲು ಬಳಸುವ ಉಪಕರಣದಿಂದ ದೇಹಕ್ಕೆ ಕಟ್ಟುವ ಪಟ್ಟಿಯಂಥ ಸಾಧನಗಳು ಸಾಮಾನ್ಯವಾಗಿ ಜನ್ಯವಾಗಿವೆ. ಜಿಗಿತಕ್ಕೆ ಬಳಸಲಾಗುವ ತಾಣದ ಅನುಸಾರ ಸಂರಕ್ಷಣಾ ವಿಧಾನಗಳು ಬದಲಾಗುತ್ತವೆ. ಚಲಿಸುವ ಕ್ರೇನುಗಳು ಮಹೋನ್ನತವಾದ ಚೇತರಿಕೆಯ ವೇಗ ಹಾಗೂ ಸ್ಥಿತಿಸ್ಥಾಪಕತ್ವವನ್ನು ಒದಗಿಸುತ್ತವೆ. ಹೀಗಾಗಿ ಜಿಗಿತಗಾರ ಕ್ಷಿಪ್ರವಾಗಿ ನೆಲದ ಮಟ್ಟಕ್ಕೆ ಇಳಿಸಲ್ಪಟ್ಟು ಸಂಪರ್ಕವನ್ನು ಕಳಚಿಕೊಳ್ಳಲು ಸಾಧ್ಯವಾಗುತ್ತದೆ. ಜಿಗಿತದ ವೇದಿಕೆಯ ಸ್ವರೂಪ ಹಾಗೂ ಒಂದು ಕ್ಷಿಪ್ರವಾದ ಪರಿಷ್ಕರಣೆಗಾಗಿರುವ ಅಗತ್ಯದ ಅನುಸಾರ ಇನ್ನೂ ಅನೇಕ ವಿಧಾನಗಳನ್ನು ರಚಿಸಲಾಗಿದೆ.

ಅತ್ಯಂತ ಎತ್ತರದ ಜಿಗಿತ

[ಬದಲಾಯಿಸಿ]
ಚಿತ್ರ:Img 1074.jpg
ಸ್ವಿಜರ್‌ಲೆಂಡ್‌ನ ಟಿಸಿನೋದಲ್ಲಿನ ಲೊಕಾರ್ನೊ ಸಮೀಪದ ವೆರ್ಜಾಸ್ಕಾ ಅಣೆಕಟ್ಟು ಬಂಗೀ ಗೋಪುರದ ತುದಿಯಿಂದ ಕೆಳಗೆ ನೋಡುವುದು
  • ಆಗಸ್ಟ್‌ 2005ರ ಆಗಸ್ಟ್‌ನಲ್ಲಿ, ಮಕಾವ್‌ ಗೋಪುರಕ್ಕೆ ಒಂದು ಬಾನ ಜಿಗಿತವನ್ನು AJ ಹ್ಯಾಕೆಟ್‌ ಸೇರಿಸುವ ಮೂಲಕ, ...233 metres (764 ft)ನಷ್ಟು ಎತ್ತರದಲ್ಲಿ ಅದನ್ನು ವಿಶ್ವದ ಅತ್ಯಂತ ಎತ್ತರದ ಜಿಗಿತವನ್ನಾಗಿಸಿದ.[೧೦]. ನಿಷ್ಕೃಷ್ಟವಾಗಿ ಹೇಳುವುದಾದರೆ ಬಾನ ಜಿಗಿತವು ಒಂದು ಬಂಗೀ ಜಿಗಿತವಾಗಿಲ್ಲವಾದ್ದರಿಂದ, ಅದು ವಿಶ್ವದ ಅತ್ಯಂತ ಎತ್ತರದ ಬಂಗೀ ಜಿಗಿತವಾಗಿ ಅರ್ಹತೆಯನ್ನು ಪಡೆಯಲಿಲ್ಲ. ಆದರೆ ಒಂದು ಸ್ಥಿತಿಸ್ಥಾಪಕ ಹಗ್ಗಕ್ಕಿಂತ ಹೆಚ್ಚಾಗಿ, ಒಂದು ಉಕ್ಕಿನ ಕೇಬಲ್‌ ಹಾಗೂ ವೇಗಾಪಕರ್ಷಕ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಒಂದು 'ವೇಗಾಪಕರ್ಷಕ-ಇಳಿಕೆಯ' ಜಿಗಿತ ಎಂದು ಉಲ್ಲೇಖಿಸಲ್ಪಡುವ ಜಿಗಿತ ಎಂದು ಕರೆಸಿಕೊಂಡಿತು. 2006ರ ಡಿಸೆಂಬರ್‌ 17ರಂದು, ಒಂದು ಸೂಕ್ತವಾದ ಬಂಗೀ ಜಿಗಿತವನ್ನು ನಿರ್ವಹಿಸುವಿಕೆಯನ್ನು ಮಕಾವ್‌ ಗೋಪುರವು ಆರಂಭಿಸಿತು.
  • ಇದು ಗಿನ್ನೆಸ್‌ ದಾಖಲೆಗಳ ಪುಸ್ತಕದ ಅನುಸಾರ "ವಿಶ್ವದಲ್ಲಿನ ಅತ್ಯಂತ ಎತ್ತರದ ವಾಣಿಜ್ಯ ಸ್ವರೂಪದ ಬಂಗೀ ಜಿಗಿತ" ಎನಿಸಿಕೊಂಡಿತು. ಮಕಾವ್‌ ಗೋಪುರ ಬಂಗಿಯು ಒಂದು "ಮಾರ್ಗದರ್ಶಿ ಕೇಬಲ್‌" ವ್ಯವಸ್ಥೆಯನ್ನು ಹೊಂದಿಲ್ಲವಾದ್ದರಿಂದ, ಅದು ತೂಗಾಟವನ್ನು ಸೀಮಿತಗೊಳಿಸುತ್ತದೆ (ಈ ಜಿಗಿತವು ಸ್ವತಃ ಗೋಪುರದ ರಚನೆಗೆ ಅತ್ಯಂತ ಸನಿಹದಲ್ಲಿದೆ), ಆದರೆ ಇಳಿಯುವಿಕೆಯ ವೇಗದ ಮೇಲೆ ಅದು ಯಾವುದೇ ಪರಿಣಾಮವನ್ನು ಹೊಂದಿರುವುದಿಲ್ಲ. ಆದ್ದರಿಂದ ಇದು ವಿಶ್ವದಾಖಲೆಗೆ ಸಂಬಂಧಿಸಿದ ಜಿಗಿತವಾಗಿ ಈಗಲೂ ಅರ್ಹತೆಯನ್ನು ಹೊಂದಿದೆ. ಸದ್ಯದಲ್ಲಿ ಕಾರ್ಯಾ ಚರಣೆಯಲ್ಲಿರುವ ಮತ್ತೊಂದು ವ್ಯಾಪಾರೀ ಬಂಗೀ ಜಿಗಿತವೂ ಅಸ್ತಿತ್ವದಲ್ಲಿದ್ದು, ಅದು.220 metres (720 ft)ರಲ್ಲಿರುವ ಮೂಲಕ ಕೇವಲ 13ಮೀ.ನಷ್ಟು ಚಿಕ್ಕದಾಗಿದೆ.
  • ಮಾರ್ಗದರ್ಶಿ ಹಗ್ಗಗಳಿಲ್ಲದೆಯೇ ಮಾಡಲಾಗುವ ಈ ಜಿಗಿತವು ಸ್ವಿಜರ್‌ಲೆಂಡ್‌ನ ಲೊಕಾರ್ನೊದ ಸಮೀಪದಲ್ಲಿ ನೆಲೆಗೊಂಡಿದೆ ಮತ್ತು ವೆರ್ಜಾಸ್ಕಾ ಅಣೆಕಟ್ಟಿನ ಮೇಲ್ಭಾಗದಿಂದ ಇದು ನೆರವೇರಿಸಲ್ಪಡುತ್ತದೆ (ಚಿತ್ರಿಸಲಾಗಿದೆ). ಗೋಲ್ಡನ್‌ ಐ ಎಂಬ ಜೇಮ್ಸ್‌ ಬಾಂಡ್‌ ಚಲನ ಚಿತ್ರದ ಆರಂಭಿಕ ದೃಶ್ಯದಲ್ಲಿ ಈ ಜಿಗಿತವನ್ನು ಎದ್ದುಕಾಣುವಂತೆ ತೋರಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ಬ್ಲೌಕ್ರಾನ್ಸ್‌ ಸೇತುವೆಯ ಮತ್ತು ವೆರ್ಜಾಸ್ಕಾ ಅಣೆಕಟ್ಟು ಜಿಗಿತಗಳು ಒಂದು ಏಕಹಗ್ಗದಿಂದ ಮಾಡಲಾಗುವ ಅಪ್ಪಟ ಸ್ವತಂತ್ರ ಪತನದ ತೂಗಾಟದ ಬಂಗೀ ಜಿಗಿತ ಗಳಾಗಿವೆ.
ನೇಪಾಳದ ದಿ ಲಾಸ್ಟ್‌ ರೆಸಾರ್ಟ್‌ನಲ್ಲಿನ ಸೇತುವೆಯಿಂದ ಬಂಗೀ ಜಿಗಿತ
  • ಬ್ಲೌಕ್ರಾನ್ಸ್‌ ಸೇತುವೆಯು 1997ರಲ್ಲಿ ಪ್ರಾರಂಭವಾಯಿತು ಮತ್ತು ಇದು ಒಂದು ಲೋಲಕದಂಥ ಬಂಗೀ ವ್ಯವಸ್ಥೆಯನ್ನು ಬಳಸುತ್ತದೆ. ವೇದಿಕೆಯಿಂದ ಶುರುವಾಗಿ ಕೆಳಗೆ ಹರಿಯುವ ನದಿಯವರೆಗೆ ಇದು 216 ಮೀಟರ್‌ನಷ್ಟು ಎತ್ತರವಿದೆ.[೧೧] ಅಳತೆಯ ನಿಖರತೆಯ ಕುರಿತು ಖಾತ್ರಿಪಡಿಸಿಕೊಳ್ಳುವ ಸಲುವಾಗಿ, ಗಿನ್ನೆಸ್‌ ದಾಖಲೆಯ ವ್ಯವಸ್ಥೆಯು ಕೇವಲ ನೆಲೆಗೊಳಿಸಲಾದ ವಸ್ತುಗಳಿಂದ ಅಥವಾ ರಚನೆಗಳಿಂದ ಮಾಡಲಾದ ಜಿಗಿತಗಳನ್ನಷ್ಟೇ ದಾಖಲಿಸುತ್ತದೆ. ಆದಾಗ್ಯೂ, ಜಾನ್‌ ಕೋಕಲ್‌ಮನ್‌ ಎಂಬಾತ 1989ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಒಂದು ಬಿಸಿಗಾಳಿಯ ಬಲೂನಿನಿಂದ ....2,200-foot (670 m)ನಷ್ಟು ಎತ್ತರದಿಂದ ಒಂದು ಬಂಗೀ ಜಿಗಿತವನ್ನು ದಾಖಲಿಸಿದ.
  • 1991ರಲ್ಲಿ ಆಂಡ್ರ್ಯೂ ಸ್ಯಾಲಿಸ್‌ಬರಿ ಎಂಬಾತ ಒಂದು ದೂರದರ್ಶನ ಕಾರ್ಯಕ್ರಮಕ್ಕಾಗಿ ಹಾಗೂ ರೀಬಾಕ್‌ ಪ್ರಾಯೋಜಕತ್ವದೊಂದಿಗೆ, ಕ್ಯಾನ್‌ಕನ್‌ ಮೇಲೆ ...9,000 feet (2,700 m)ನಷ್ಟು ಎತ್ತರದಿಂದ ಒಂದು ಹೆಲಿಕಾಪ್ಟರ್‌‌ನಿಂದ ಜಿಗಿದ. 3,157 feet (962 m)ನಷ್ಟು ಎತ್ತರದಲ್ಲಿ ಸಂಪೂರ್ಣ ವಿಸ್ತರಣೆ ಅಥವಾ ಚಾಚುವಿಕೆಯು ದಾಖಲಿಸಲ್ಪಟ್ಟಿತು. ಧುಮುಕುಕೊಡೆಯ (ಪ್ಯಾರಷೂಟ್‌) ನೆರವಿನೊಂದಿಗೆ ಅವನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ. ಕೊಲೊರೆಡೋದಲ್ಲಿನ ರಾಯಲ್‌ ಗಾರ್ಜ್‌ ಸೇತುವೆಯ ಬಳಿಯ ಒಂದು ವ್ಯಾಪಾರೀ ಜಿಗಿತವು ಇತರೆಲ್ಲಾ ಜಿಗಿತಗಳಿಗಿಂತ ಎತ್ತರದ್ದಾಗಿದೆ. ಇಲ್ಲಿನ ವೇದಿಕೆಯ ಎತ್ತರವು ...321 metres (1,053 ft)ನಷ್ಟಿದೆ. ಆದಾಗ್ಯೂ, ಮೊದಲು 2005ರಲ್ಲಿ ಆಮೇಲೆ ಮತ್ತೆ 2007ರಲ್ಲಿ ನಡೆದ ರಾಯಲ್‌ ಗಾರ್ಜ್‌ ಗೋ ಫಾಸ್ಟ್‌ ಗೇಮ್ಸ್‌ನ ಒಂದು ಭಾಗವಾಗಿ ಈ ಜಿಗಿತವು ತುಂಬಾ ಅಪರೂಪವಾಗಿ ದೊರೆಯುತ್ತದೆ.

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]
ನಾರ್ಮ್ಯಾಂಡಿಯಲ್ಲಿನ ಸೌಲ್ಯೂವ್ರೆ ವಯಾಡಕ್ಟ್‌ನಿಂದ ಬಂಗೀ ಜಿಗಿತ
  • ಹಲವಾರು ಪ್ರಮುಖ ಚಲನಚಿತ್ರಗಳು ಬಂಗೀ ಜಿಗಿತಗಳನ್ನು ಒಳಗೊಂಡಿವೆ. ಇದರಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು 1995ರಲ್ಲಿ ಬಂದ ಗೋಲ್ಡನ್‌ ಐ ಎಂಬ ಜೇಮ್ಸ್‌ ಬಾಂಡ್‌ ಚಲನಚಿತ್ರದ ಆರಂಭಿಕ ದೃಶ್ಯ. ಈ ದೃಶ್ಯದಲ್ಲಿ, ರಷ್ಯಾದಲ್ಲಿರುವ ಅಣೆಕಟ್ಟೆಯೊಂದರ ಅಂಚಿನ ಮೇಲೆ ಒಂದು ಜಿಗಿತವನ್ನು ಬಾಂಡ್‌ ಕೈಗೊಳ್ಳುತ್ತಾನೆ (ವಾಸ್ತವವಾಗಿ ಈ ಅಣೆಕಟ್ಟೆಯು ಸ್ವಿಜರ್‌ಲೆಂಡ್‌‌‌‌ನಲ್ಲಿರುವ ವೆರ್ಜಾಸ್ಕಾ ಅಣೆಕಟ್ಟೆಯಾಗಿದೆ, ಮತ್ತು ಸದರಿ ಜಿಗಿತವು ಕೃತಕವಾಗಿ ಸೃಷ್ಟಿಸಲಾಗಿದ್ದ ಒಂದು ವಿಶೇಷ ಪರಿಣಾಮದ ಜಿಗಿತವಾಗಿರದೆ ಒಂದು ಅಪ್ಪಟ ಜಿಗಿತ ವಾಗಿತ್ತು) ದಕ್ಷಿಣ ಕೊರಿಯಾದ ಬಂಗೀ ಜಂಪಿಂಗ್‌ ಆಫ್‌ ದೆರ್‌ ಓನ್‌ (Beonjijeompeureul hada 번지점프를 하다, 2001) ಎಂಬ ಚಲನಚಿತ್ರದ ಶೀರ್ಷಿಕೆ ಫಲಕದಲ್ಲಿ ಇದು ಕಾಣಿಸಿಕೊಳ್ಳುತ್ತದೆಯಾದರೂ, ಚಲನಚಿತ್ರದಲ್ಲಿ ಒಂದು ದೊಡ್ಡ ಪಾತ್ರವನ್ನೇನೂ ವಹಿಸುವುದಿಲ್ಲ.
  • 1986ರಲ್ಲಿ, ನೋಯೆಲ್‌ ಎಡ್ಮಂಡ್ಸ್‌‌‌ನಿಂದ ಪ್ರಸ್ತುತಪಡಿಸಲ್ಪಟ್ಟ ದಿ ಲೇಟ್‌, ಲೇಟ್‌ ಬ್ರೇಕ್‌ಫಾಸ್ಟ್‌ ಷೋ ಎಂಬ BBCಯ TV ಕಾರ್ಯಕ್ರಮವನ್ನು ಪ್ರಸಾರದಿಂದ ಹಿಂತೆಗೆದುಕೊಳ್ಳಲಾಯಿತು. ಸದರಿ ಕಾರ್ಯಕ್ರಮದ 'ವಿರ್ಲಿವೀಲ್‌' ಎಂಬ ಪ್ರತ್ಯಕ್ಷ ಸಾಹಸ ವಿಭಾಗಕ್ಕೆ ಸಂಬಂಧಿಸಿದ ಮೈಕೇಲ್‌ ಲಶ್ ಎಂಬ ಓರ್ವ ಸ್ವಯಂಸೇವಕ ಒಂದು ಬಂಗೀ ಜಿಗಿತದ ತಾಲೀಮು ನಡೆಸುತ್ತಿರುವ ಸಂದರ್ಭದಲ್ಲಿ ಅಸುನೀಗಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಯಿತು. ಡೇಲಿ ಸ್ಟಾರ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ 'ಕ್ರಿಮಿನಲ್‌ ಹೈಟ್ಸ್‌' ಎಂಬ 1982ರ ಜಡ್ಜ್‌ ಡ್ರೆಡ್‌ ಕಥೆಯಲ್ಲಿ ಬಂಗೀ ಜಿಗಿತವನ್ನು ನಗರದಲ್ಲಿ ಮುಂದೆ ಜನಪ್ರಿಯವಾಗಲಿರುವ 'ಅತಿಗೀಳು' (ಕ್ರೇಜ್) ಎಂಬಂತೆ ಚಿತ್ರಿಸಲಾಗಿತ್ತು.
  • ಮೈಕೇಲ್‌ ಚಬಾನ್‌‌ದಿ ಅಮೇಜಿಂಗ್‌ ಅಡ್ವೆಂಚರ್ಸ್‌ ಆಫ್‌ ಕ್ಯಾವಲಿಯೆರ್‌ ಅಂಡ್‌ ಕ್ಲೇ ಎಂಬ ಕಾದಂಬರಿಯಲ್ಲಿ ಕಾಲ್ಪನಿಕ ಮೂಲ-ಬಂಗೀ ಜಿಗಿತವೊಂದು ಕಥಾವಸ್ತುವಿನ ಒಂದು ಅಂಶವಾಗಿದೆ. ಕಲಾವಿದೆ ಜೆನ್ನಿಫರ್‌ ಲೋಪೆಜ್‌ ಸೆಲಿನಾ ಕ್ವಿಂಟನಿಲ್ಲಾ-ಪೆರೆಜ್ ಎಂಬ ಪಾತ್ರವನ್ನು ವಹಿಸಿರುವ ಸೆಲಿನಾ ಎಂಬ ಚಲನಚಿತ್ರದಲ್ಲಿ, ಅವಳು ಉತ್ಸವವೊಂದರಲ್ಲಿ ಬಂಗೀ ಜಿಗಿತದಲ್ಲಿ ಪಾಲ್ಗೊಳ್ಳುವಂತೆ ತೋರಿಸಲಾಗಿದೆ. ಇದು 1995ರಲ್ಲಿ ಸೆಲಿನಾಳ ಸಾವು ಸಂಭವಿಸುವುದಕ್ಕೆ ಸ್ವಲ್ಪವೇ ಮುಂಚಿತವಾಗಿ ನಡೆದ ಒಂದು ವಾಸ್ತವಿಕ ಘಟನೆಯಾಗಿದೆ.

ಮಾರ್ಪಾಡುಗಳು

[ಬದಲಾಯಿಸಿ]
ಫ್ರಾನ್ಸ್‌ನ ಸೇಂಟ್‌-ಜೀನ್‌-ಡೆ-ಸಿಕ್ಸ್ಟ್‌ನಲ್ಲಿನ ಒಂದು ಇಳುಕಲಿನ ಆಚೆಯ ಬಂಗೀ ಜಿಗಿತ
  • "ಕ್ಯಾಟಪಲ್ಟ್‌"ನಲ್ಲಿ ಅಥವಾ "ಕವಣೆಶೈಲಿ"ಯಲ್ಲಿ (ಹಿಮ್ಮುಖವಾದ ಬಂಗೀ ಅಥವಾ ಬಂಗೀ ಕ್ಷಿಪಣಿ) 'ಜಿಗಿತಗಾರ'ನು ನೆಲದಿಂದ ತನ್ನ ಚಟುವಟಿಕೆಯನ್ನು ಆರಂಭಿಸುತ್ತಾನೆ.[೧೨] ಜಿಗಿತಗಾರನಿಗೆ ರಕ್ಷಣೆಯಿರುತ್ತದೆ ಮತ್ತು ಹಗ್ಗವು ಎಳೆಯಲ್ಪಟ್ಟಿರುತ್ತದೆ, ಆಮೇಲೆ ಅದನ್ನು ಬಿಡುಗಡೆಮಾಡಿದಾಗ ಗಾಳಿಯೊಳಕ್ಕೆ ಜಿಗಿತಗಾರನು ಉಡಾಯಿಸಲ್ಪಡುತ್ತಾನೆ ಅಥವಾ ಚಿಮ್ಮಿಸಲ್ಪಡುತ್ತಾನೆ. ಒಂದು (ಅರೆ-)ಸ್ಥಾಯಿಯಾದ ರಚನೆಗೆ ಜೋಡಿಸಲಾದ ಒಂದು ಕ್ರೇನು ಅಥವಾ ಒಂದು ಎತ್ತುಗಯಂತ್ರವನ್ನು ಬಳಸಿಕೊಂಡು ಇದನ್ನು ಹಲವು ವೇಳೆ ಸಾಧಿಸಲಾಗುತ್ತದೆ.
  • ಹಗ್ಗವನ್ನು ಎಳೆಯುವ ಮತ್ತು ನಂತರದಲ್ಲಿ ಸಹಭಾಗಿಯನ್ನು ನೆಲಕ್ಕೆ ಇಳಿಸುವ ಕಾರ್ಯವನ್ನು ಇದು ಸರಳೀಕರಿಸುತ್ತದೆ. ಎರಡು ಓರೆಯಾದ ಹಗ್ಗಗಳೊಂದಿಗಿನ "ಟ್ವಿನ್‌ ಟವರ್‌" ಇದನ್ನು ಹೋಲುವಂತಿದೆ. ಬಂಗಿ ಅಡ್ಡ ರಕ್ಷಾ ಚೌಕಟ್ಟು ಎಂಬುದು ತನ್ನ ಹೆಸರೇ ಸೂಚಿಸುವಂತೆ ಬಂಗಿ ಮತ್ತು ಅಡ್ಡ ರಕ್ಷಾ ಚೌಕಟ್ಟುಗಾರಿಕೆಯ ಘಟಕಗಳನ್ನು ಬಳಸಿಕೊಳ್ಳುತ್ತದೆ. ಒಂದು ರಕ್ಷಾ ಚೌಕಟ್ಟಿನ ಮೇಲೆ ಸಹಭಾಗಿಯು ಪ್ರಾರಂಭಿಸುತ್ತಾನೆ ಮತ್ತು ದೇಹಕ್ಕೆ ಕಟ್ಟುವ ಪಟ್ಟಿಯಂಥ ಸಾಧನವೊಂದಕ್ಕೆ ಅವನನ್ನು ಜೋಡಣೆ ಮಾಡಿರಲಾಗುತ್ತದೆ. ಈ ಸಾಧನವು ಬಂಗಿ ಹಗ್ಗಗಳ ಮೂಲಕ ರಕ್ಷಾ ಚೌಕಟ್ಟಿನ ಪಾರ್ಶ್ವಗಳ ಮೇಲಿನ ಎರಡು ಉನ್ನತ ಕೋಲುಗಳಿಗೆ ಜೋಡಿಸಲ್ಪಟ್ಟಿರುತ್ತದೆ.
  • ಅವರು ಜಿಗಿಯಲು ಪ್ರಾರಂಭಿಸಿದಾಗ, ಬಂಗಿ ಹಗ್ಗಗಳು ಬಿಗಿಗೊಳ್ಳುತ್ತವೆ. ಇದರಿಂದಾಗಿ, ಸಾಮಾನ್ಯವಾಗಿ ಕೇವಲ ರಕ್ಷಾ ಚೌಕಟ್ಟು ಒಂದರಿಂದಲೇ ಜಿಗಿತವನ್ನು ಮಾಡಿದಾಗ ಆಗುವದಕ್ಕಿಂತಲೂ ಹೆಚ್ಚಿರುವ ಒಂದು ಎತ್ತರದ ಜಿಗಿತಕ್ಕೆ ಅವಕಾಶವಾಗುತ್ತದೆ. ಬಂಗೀ ಓಟದಲ್ಲಿ ಹಿಂದೆ ಸೂಚಿಸಿದ ಯಾವುದೇ ಬಗೆಯ ಜಿಗಿತಗಳು ಇರುವುದಿಲ್ಲ. ಇದರ ಹೆಸರೇ ಸೂಚಿಸುವಂತೆ, ಇದು ಜೋಡಣೆಗೊಂಡಿರುವ ಒಂದು ಬಂಗೀ ಹಗ್ಗದೊಂದಿಗೆ ಒಂದು ಪಥದಾದ್ಯಂತ ಓಡುವುದನ್ನು ಒಳಗೊಂಡಿರುತ್ತದೆ. ಒಂದು ವೆಲ್‌ಕ್ರೊ ಬಂಧನಿಯ-ಆಧಾರವಿರುವ ಗುರುತುಕಾರಕವನ್ನು ಅನೇಕ ಬಾರಿ ಇದು ಒಳಗೊಂಡಿದ್ದು, ಬಂಗೀ ಹಗ್ಗವು ಹಿಂದಕ್ಕೆ ಎಳೆದದ್ದಕ್ಕೆ ಮುಂಚಿತವಾಗಿ ಬಂಗೀ ಓಟಗಾರನು ಎಷ್ಟು ದೂರವನ್ನು ಕ್ರಮಿಸಿದ ಎಂಬುದನ್ನು ಗುರುತುಮಾಡಲು ಇದನ್ನು ಬಳಸಲಾಗುತ್ತದೆ.
  • ಒಂದು ಇಳುಕಲಿನಾಚೆಯ ಬಂಗೀ ಜಿಗಿತ. "ಬಂಗೀಗಳು" ಎಂದು ಕರೆಯಲಾಗುವ ಎರಡು ರಬ್ಬರ್‌ ಹಗ್ಗಗಳನ್ನು ಸಹಭಾಗಿಯ ಸೊಂಟದ ಸುತ್ತಲೂ ದೇಹಕ್ಕೆ ಕಟ್ಟುವ ಪಟ್ಟಿಯಂಥ ಸಾಧನವೊಂದಕ್ಕೆ ಕಟ್ಟಲಾಗುತ್ತದೆ. ಆ ಬಂಗೀ ಹಗ್ಗಗಳನ್ನು ಉಕ್ಕಿನ ಕೇಬಲ್‌ನೊಂದಿಗೆ ಸಂಬಂಧಕಲ್ಪಿಸಲಾಗುತ್ತದೆ. ಇದರಿಂದಾಗಿ ಸಹಭಾಗಿಗಳು ಜಾರಿಕೊಂಡು ಹೋಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತುಕ್ಕುಹಿಡಿಯದ ರಾಟೆಗಳಿಗೆ ಧನ್ಯವಾದಗಳನ್ನು ಹೇಳಲೇಬೇಕು. ಜಿಗಿಯುವುದಕ್ಕೆ ಮುಂಚಿತವಾಗಿ ಸಹಭಾಗಿಗಳು ಬೈಕನ್ನು ಓಡಿಸುತ್ತಾರೆ, ಸ್ಲೆಜ್‌ಗಾಡಿಯಲ್ಲಿ ಸಾಗುತ್ತಾರೆ ಅಥವಾ ಹಿಮದದಲ್ಲಿ ಜಾರಾಟ ನಡೆಸುತ್ತಾರೆ.

ಸುರಕ್ಷತೆ ಮತ್ತು ಸಂಭವನೀಯ ಪೆಟ್ಟು

[ಬದಲಾಯಿಸಿ]
  • ಜಿಗಿತವೊಂದರ ಅವಧಿಯಲ್ಲಿ ವ್ಯಾಪಕ ಬಗೆಯಲ್ಲಿ ಗಾಯಗಳಾಗುವ ಸಂಭವಗಳಿರುತ್ತವೆ. ಒಂದು ವೇಳೆ, ದೇಹಕ್ಕೆ ಕಟ್ಟುವ ಪಟ್ಟಿಯಂಥ ಸುರಕ್ಷತೆಯ ಸಾಧನವು ವಿಫಲಗೊಂಡರೆ, ಹಗ್ಗ ಸ್ಥಿತಿಸ್ಥಾಪಕತ್ವವವು ತಪ್ಪಾಗಿ ಲೆಕ್ಕಾಚಾರ ಹಾಕಲ್ಪಟ್ಟಿದ್ದರೆ, ಅಥವಾ ಜಿಗಿತದ ವೇದಿಕೆಗೆ ಹಗ್ಗವು ಸೂಕ್ತರೀತಿಯಲ್ಲಿ ಕಟ್ಟಲ್ಪಡದೇ ಇದ್ದಾಗ ಜಿಗಿತವೊಂದರ ಅವಧಿಯಲ್ಲಿ ಸಹಭಾಗಿಯು ಗಾಯಗೊಳ್ಳುವ ಸಾಧ್ಯತೆಯಿರುತ್ತದೆ. ಬಹುತೇಕ ನಿದರ್ಶನಗಳಲ್ಲಿ, ಇದರಲ್ಲಿ ತೊಡಗಿಸಿಕೊಂಡವರು ಎಸಗುವ ತಪ್ಪಿನ ಪರಿಣಾಮವಾಗಿಯೂ ಗಾಯವಾಗುವಿಕೆಯು ಕಂಡುಬರಬಹುದು. ದೇಹಕ್ಕೆ ಕಟ್ಟುವ ಪಟ್ಟಿಯ ಸಾಧನವು ತಪ್ಪಾಗಿ ನಿರ್ವಹಿಸಲ್ಪಡುವಂತೆ ಮಾಡಿಕೊಂಡ ಅವರ ಸಿದ್ಧತೆಯಲ್ಲಿನ ದೋಷ ಇದಕ್ಕೆ ಕಾರಣವಾಗುತ್ತದೆ.
  • ಒಂದು ವೇಳೆ ಜಿಗಿತಗಾರರಿಗೆ ತಮ್ಮ ದೇಹವು ಹಗ್ಗದ ಗೋಜಲಲ್ಲಿ ಸಿಕ್ಕಿಕೊಂಡಿರುವ ಅನುಭವವಾದರೆ ಅದು ಮತ್ತೊಂದು ಪ್ರಮುಖ ಪೆಟ್ಟು ಎನಿಸಿಕೊಳ್ಳುತ್ತದೆ. ಇತರ ಪೆಟ್ಟುಗಳಲ್ಲಿ ಇವು ಸೇರಿವೆ: ಕಣ್ಣಿನ ಹಾನಿ[೧೩][೧೪] , ಹಗ್ಗದಿಂದಾದ ಬೊಬ್ಬೆ, ಗರ್ಭಕೋಶದ ಜಾರುವಿಕೆ, ಕೀಲು ತಪ್ಪಿಕೆಗಳು, ಮೂಗೇಟುಗಳು, ಚಾವಟಿಯೇಟು, ಸೆಟೆದುಕೊಂಡ ಬೆರಳುಗಳು ಮತ್ತು ಬೆನ್ನಿನ ಪೆಟ್ಟು. ವಯಸ್ಸು, ಉಪಕರಣ, ಅನುಭವ, ಜಿಗಿತದ ತಾಣ ಹಾಗೂ ದೇಹತೂಕ ಇವು ಕೆಲವೊಂದು ಅಂಶಗಳಾಗಿವೆ, ಮತ್ತು ಅಧೈರ್ಯದ ಸ್ಥಿತಿ ಅಥವಾ ನರೋದ್ರೇಕವು ಕಣ್ಣಿನ ಹಾನಿಗಳನ್ನು ಉಲ್ಬಣಗೊಸಲು ಸಾಧ್ಯವಿದೆ.[೧೫] [26]1997ರಲ್ಲಿ, 16-ಸದಸ್ಯರ ವೃತ್ತಿಪರ ಬಂಗೀ ಜಿಗಿತ ತಂಡವೊಂದರ ಓರ್ವ ಸದಸ್ಯೆಯಾಗಿದ್ದ ಲೌರಾ ಪ್ಯಾಟರ್‌ಸನ್‌ ಎಂಬಾಕೆ ತಲೆಬುರುಡೆಗಾದ ಭಾರೀ ಹಾನಿಯಿಂದಾಗಿ ಸತ್ತಳು. ಅಸಮರ್ಪಕವಾಗಿ ನಿರ್ವಹಿಸಲಾದ ಬಂಗೀ ಹಗ್ಗಗಳೊಂದಿಗೆ ಲೂಸಿಯಾನಾ ಸೂಪರ್‌ಡೂಮ್‌‌ನ ಉನ್ನತ ಮಟ್ಟದಿಂದ ಅವಳು ಜಿಗಿದಾಗ, ಕಾಂಕ್ರೀಟ್‌-ಆಧಾರದ ಆಟದ ಮೈದಾನದೊಳಗೆ ತಲೆ-ಮುಂದಾಗಿ ಅವಳು ಬಲವಾಗಿ ಡಿಕ್ಕಿಹೊಡೆದದ್ದು ಅವಳ ಸಾವಿಗೆ ಕಾರಣವಾಯಿತು. ಸೂಪರ್‌ ಬೌಲ್‌ XXXIಅರ್ಧಾವಧಿಯ ಪ್ರದರ್ಶನದ ಅವಧಿಯಲ್ಲಿ ಪ್ರಸ್ತುತಪಡಿಸಬೇಕಾಗಿದ್ದ ಒಂದು ಪ್ರದರ್ಶನಕ್ಕಾಗಿ ಅವಳು ಅಭ್ಯಾಸವನ್ನು ಮಾಡುತ್ತಿದ್ದಳು. ಸದರಿ ಪ್ರದರ್ಶನದ ಬಂಗೀ ಜಿಗಿತದ ಭಾಗವನ್ನು ಕಾರ್ಯಸೂಚಿಯಿಂದ ತೆಗೆದುಹಾಕಲಾಯಿತು ಮತ್ತು ಪ್ಯಾಟರ್‌ಸನ್‌ಳ ಒಂದು ಸ್ಮರಣೆಯನ್ನು ಅದರಲ್ಲಿ ಸೇರಿಸಲಾಯಿತು.

ಟೆಂಪ್ಲೇಟು:Extreme Sports

ಆಕರಗಳು

[ಬದಲಾಯಿಸಿ]
  1. AJ ಹ್ಯಾಕೆಟ್‌ (2008). ವೆಲ್‌ಕಮ್‌ ಕೇರ್ನ್ಸ್‌ Archived 2010-01-28 ವೇಬ್ಯಾಕ್ ಮೆಷಿನ್ ನಲ್ಲಿ.. 2008ರ ಅಕ್ಟೋಬರ್‌ 17ರಂದು ಮರುಸಂಪಾದಿಸಲಾಯಿತು.
  2. ಜಂಗಲ್‌ ಬಂಗಿ ಜಂಪ್‌ (2008). ಫುಕೆಟ್‌ ಥೈಲೆಂಡ್‌ . 2008ರ ಅಕ್ಟೋಬರ್‌ 17ರಂದು ಮರು ಸಂಪಾದಿಸಲಾಯಿತು.
  3. ಕೋಕಲ್‌ಮನ್‌ JW, ಹಬಾರ್ಡ್‌ M. ಬಂಗೀ ಜಂಪಿಂಗ್‌ ಕಾರ್ಡ್‌ ಡಿಸೈನ್‌ ಯೂಸಿಂಗ್‌ ಎ ಸಿಂಪಲ್‌ ಮಾಡೆಲ್‌. ಸ್ಪೋರ್ಟ್ಸ್‌ ಎಂಜಿನಿಯರಿಂಗ್‌ 2004; 7(2):89-96
  4. "www.ajhackett.com.au". Archived from the original on 2007-08-28. Retrieved 2010-04-19.
  5. AJ ಹ್ಯಾಕೆಟ್‌ (2008)[http:// www. ajha ckett.com.au/history.html#info ಹಿಸ್ಟರಿ ] 2008ರ ಅಕ್ಟೋಬರ್‌ 17ರಂದು ಮರುಸಂಪಾದಿಸಲಾಯಿತು.
  6. ಎರಿಕ್‌ ಲಾರ್ಸನ್‌, 2003 ಪುಟ 135, ದಿ ಡೆವಿಲ್‌ ಇನ್‌ ದಿ ವೈಟ್‌ ಸಿಟಿ; ಮರ್ಡರ್‌, ಮ್ಯಾಜಿಕ್‌, ಅಂಡ್‌ ಮ್ಯಾಡ್‌ನೆಸ್‌ ಅಟ್‌ ದಿ ಫೇರ್‌ ದಟ್‌ ಚೇಂಜ್ಡ್‌ ಅಮೆರಿಕಾ . ಉಲ್ಲೇಖ ಚಿಕಾಗೊ ಟ್ರಿಬ್ಯೂನ್‌ , ನವೆಂಬರ್‌ 9, 1889.
  7. *ಏರಿಯಲ್‌ ಎಕ್ಸ್‌ಟ್ರೀಮ್‌ ಸ್ಪೋರ್ಟ್ಸ್‌ (2008). ಹಿಸ್ಟರಿ ಆಫ್‌ ಬಂಗೀ Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ.. 2008ರ ಅಕ್ಟೋಬರ್‌ 17ರಂದು ಮರುಸಂಪಾದಿಸಲಾಯಿತು.
  8. Fiona Rotherham (1 August 2004). "Can you Hackett?".
  9. "AJ ಹ್ಯಾಕೆಟ್‌ ಬಂಗಿ". Archived from the original on 2008-10-14. Retrieved 2010-04-19.
  10. "ಆರ್ಕೈವ್ ನಕಲು". Archived from the original on 2008-12-05. Retrieved 2010-04-19.
  11. [೧] Archived 2010-04-10 ವೇಬ್ಯಾಕ್ ಮೆಷಿನ್ ನಲ್ಲಿ.}
  12. .asterpix.com/console/?avi=8502201 "Bungee Rocket BASE Jump - Wow!". {{cite web}}: Check |url= value (help)
  13. ಕ್ರಾಟ್‌ R, ಮೀಟ್ಜ್‌ H, ಕ್ರೀಗಲ್‌ಸ್ಟೀನ್‌ GK. ಆರ್ಬಿಟಲ್‌ ಎಂಫಿಸಿಮಾ ಆಸ್‌ ಎ ಕಾಂಪ್ಲಿಕೇಶನ್‌ ಆಫ್‌ ಬಂಗೀ ಜಂಪಿಂಗ್‌. ಮೆಡಿಕಲ್‌ ಸೈನ್ಸ್‌ ಸ್ಪೋರ್ಟ್ಸ್‌ ಎಕ್ಸರ್‌ಸೈಸ್‌ 1997;29:850–2.
  14. ವ್ಯಾಂಡರ್‌ಫೋರ್ಡ್‌ L, ಮೆಯೆರ್ಸ್‌ M. ಇಂಜುರೀಸ್‌ ಅಂಡ್‌ ಬಂಗೀ ಜಂಪಿಂಗ್‌. ಸ್ಪೋರ್ಟ್ಸ್‌ ಮೆಡಿಸಿನ್‌ 1995;20:369–74
    • ಫಿಲಿಪ್‌ JA, ಪಿಂಟೊ AM, ರೊಸಾಸ್‌ V, ಮತ್ತು ಇತರರು. ರೆಟಿನಲ್‌ ಕಾಂಪ್ಲಿಕೇಷನ್ಸ್‌ ಆಫ್ಟರ್‌ ಬಂಗೀ ಜಂಪಿಂಗ್‌. ಇಂಟ್‌ ಆಫ್ಥಲ್ಮಾಲ್‌ 1994–95;18:359–60