ಕಲೇಡಿಯಮ್
ಕಲೇಡಿಯಮ್ | |
---|---|
Caladium bicolor. | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Caladium |
Range of the genus Caladium | |
Synonyms[೧] | |
|
ಕಲೇಡಿಯಮ್ ಬಹು ಅಂದವಾದ, ವರ್ಣರಂಜಿತವಾದ ಎಲೆಗಳುಳ್ಳ ಒಂದು ಲಶುನ ಸಸ್ಯ. ಏರೇಸೀ ಕುಟುಂಬಕ್ಕೆ ಸೇರಿದೆ. ದಕ್ಷಿಣ ಅಮೆರಿಕ ಇದರ ತೌರು. ಸುಂದರವಾದ ಎಲೆಗಳಿಗೋಸ್ಕರ ಅಲಂಕಾರಸಸ್ಯವಾಗಿ ಇದನ್ನು ಬೆಳೆಸುತ್ತಾರೆ. ಕುಂಡಗಳಲ್ಲಿ ಬೆಳೆಸಿ ಮನೆಯ ವರಾಂಡ, ವಾಸದ ಕೋಣೆಗಳು, ಮೊಗಸಾಲೆ ಮುಂತಾದುವನ್ನು ಅಲಂಕರಿಸಲು ಉಪಯೋಗಿಸುವುದು ವಾಡಿಕೆ.
ವರ್ಣನೆ
[ಬದಲಾಯಿಸಿ]ಎಲೆಗಳು ಬಹಳ ಅಗಲವಾಗಿದ್ದು ವರ್ಣವೈವಿಧ್ಯವನ್ನು ತೋರುತ್ತವೆ. ಅವುಗಳ ಆಕಾರ ಬಾಣದ ಮೊನೆಯಂತೆ. ಕಲೇಡಿಯಮ್ನಲ್ಲಿ ಹಲವಾರು ಬಗೆಗಳಿವೆ. ಒಂದೊಂದು ಬಗೆಯಲ್ಲೂ ಎಲೆಗಳು ತಮ್ಮ ಗಾತ್ರ ಮತ್ತು ಬಣ್ಣಗಳಲ್ಲಿ ವೈವಿಧ್ಯವನ್ನು ಪ್ರದರ್ಶಿಸುತ್ತವೆ. ಹಸಿರು ಹಿನ್ನೆಲೆಯಲ್ಲಿ ಬಿಳಿಯ ಚುಕ್ಕಿಗಳು, ಬಿಳಿ ಬಣ್ಣವಿದ್ದು ಹಸಿರು ಅಂಚು ಮತ್ತು ಅಲ್ಲಲ್ಲೆ ಹಸಿರು ಕೆಂಪು ಚುಕ್ಕಿಗಳು, ಅಪ್ಪಟ ಕೆಂಪು ಬಣ್ಣದ ಮೇಲೆ ಹಸಿರು ಅಂಚು ಮುಂತಾದ ನಾನಾ ಬಗೆಯ ಕಣ್ಣು ಕೋರೈಸುವಂಥ ಬಣ್ಣಗಳು ಎಲೆಗಳಿವೆ. ಇದರಿಂದ ಗಿಡ ಬಹಳ ಮನಮೋಹಕವಾಗಿ ಕಾಣುತ್ತದೆ.
ವ್ಯವಸಾಯ
[ಬದಲಾಯಿಸಿ]ಎತ್ತರ ಪ್ರದೇಶಗಳಿಗಿಂತ ಮೈದಾನಪ್ರದೇಶಗಳಲ್ಲಿ ಕಲೇಡಿಯಮ್ ಚೆನ್ನಾಗಿ ಬೆಳೆಯುತ್ತದೆ. ಇದನ್ನು ನೆರಳಿನಲ್ಲಿ, ಆದರೆ ಚೆನ್ನಾಗಿ ಬೆಳಕು ಬರುವಂಥ, ಸ್ಥಳಗಳಲ್ಲಿ ಬೆಳೆಸಬೇಕು. ಹಗುರ ಮತ್ತು ಸಾರವತ್ತಾದ ಮಣ್ಣುಳ್ಳ ಭೂಮಿ ಇದಕ್ಕೆ ಒಳ್ಳೆಯದು. ಕುಂಡಗಳಲ್ಲಿ ಬೆಳೆಸುವುದಾದರೆ ಕೆಂಪುಮಣ್ಣು, ಮರಳು, ಎಲೆಗೊಬ್ಬರ ಮತ್ತು ದನದ ಗೊಬ್ಬರಗಳ ಸಮಭಾಗ ಮಿಶ್ರಣದ ಕಾಂಪೋಸ್ಟನ್ನು ಉಪಯೋಗಿಸಬೇಕು. ಇದರ ಜೊತೆಗೆ ಸ್ವಲ್ಪ ಇದ್ದಿಲುಚೂರುಗಳನ್ನು ಸೇರಿಸುವುದರಿಂದ ಸಾಧಾರಣವಾಗಿ ಕಾಂಪೋಸ್ಟ್ ಹುಳಿಯಾಗಿ ಪರಿವರ್ತನೆ ಹೊಂದುವುದನ್ನು ತಡೆಯಬಹುದು. ಸಾಧಾರಣವಾಗಿ ಎಲ್ಲ ಬಗೆಯ ಕಲೇಡಿಯಮ್‍ಗಳು ಡೆಸಿಡ್ಯುಯಸ್ (ಚಳಿಗಾಲದಲ್ಲಿ ಎಲೆ ಉದುರಿ ಹೋಗುವಂಥ) ಸಸ್ಯಗಳು. ಏಪ್ರಿಲ್-ಮೇ ತಿಂಗಳಿನಲ್ಲಿ ಗೆಡ್ಡೆಗಳಲ್ಲಿ ಹೊಸ ಮೊಳಕೆಗಳು ಹೊರಡುತ್ತವೆಯಾದ್ದರಿಂದ ಆ ಕಾಲದಲ್ಲಿ ನೆಡುವುದೊಳ್ಳೆಯದು. ಅಕ್ಟೋಬರ್-ನವೆಂಬರ್ ತಿಂಗಳ ಹೊತ್ತಿಗೆ ಗೆಡ್ಡೆಗಳು ಪೂರ್ಣ ಬೆಳೆಯುತ್ತವೆ. ಎಲೆಗಳು ಮಾತ್ರ ಒಣಗಿ ಹೋಗುತ್ತವೆ. ಆ ಸಂದರ್ಭದಲ್ಲಿ ನೀರು ಕೊಡುವುದನ್ನು ನಿಲ್ಲಿಸಿ, ಮಣ್ಣು ಒಣಗಿದ ಮೇಲೆ ಗೆಡ್ಡೆಗಳನ್ನು ಭೂಮಿಯಿಂದ ಹೊರ ತೆಗೆದು ನೀರು ಬೀಳದ ಸ್ಥಳದಲ್ಲಿ ಮುಂದೆ ನೆಡುವವರೆಗೂ ಶೇಖರಿಸಿಡಬೇಕು ಅಥವಾ ಮರಳಿನಲ್ಲಿ ಹೂತಿಟ್ಟಿರಬೇಕು. ಹೀಗೆ ಹೂತಿಟ್ಟು ಸುಪ್ತಾವಸ್ಥೆಯಲ್ಲಿರುವ ಗೆಡ್ಡೆಗಳ ಮೇಲೆ ನೆಡುವುದಕ್ಕೆ ಒಂದು ವಾರ ಮುಂಚಿತವಾಗಿ, ಸ್ವಲ್ಪ ನೀರು ಹಾಕಿದರೆ ಮೊಳಕೆಯೊಡೆಯುತ್ತದೆ. ಮೊಳಕೆ ಬಂದ ಗೆಡ್ಡೆಗಳನ್ನು ಕುಂಡಗಳಲ್ಲಿ ಅಥವಾ ಬೆಳೆಯುವ ಮಡಿಗಳಲ್ಲಿ ಮೊಳಕೆಯ ಭಾಗ ಹೊರ ಕಾಣುವಂತೆ ನೆಡಬೇಕು. ಗೆಡ್ಡೆ ಬಹಳ ಸಣ್ಣವಾದರೆ ೨-೩ ಗೆಡ್ಡೆಗಳನ್ನು ಅಥವಾ ದಪ್ಪ ಗಾತ್ರದಾದ್ದರೆ ಒಂದೇ ಒಂದನ್ನು ಕುಂಡದಲ್ಲಿ ನೆಡಬಹುದು. ಹದವರಿತು ನೀರ್ಪಕೊಡಬೇಕು. ಗಿಡ ಬೆಳೆಯುತ್ತಿರುವಾಗ ವಾರಕ್ಕೊಂದು ಸಾರಿ ಬಹು ತೆಳುವಾದ ಹಸುವಿನ ಸೆಗಣಿಯ ನೀರನ್ನು ಹಾಕಿದರೆ ಒಳ್ಳೆಯದು. ಗೆಡ್ಡೆಗಳನ್ನು ನೆಟ್ಟ ಅನಂತರ ಎಲೆಗಳು ಪೂರ್ಣವಾಗಿ ಬೆಳೆಯುವ ಮೊದಲೇ ಹೂಗೊಂಚಲುಗಳು ಹೊರಡುತ್ತವೆ. ಇವನ್ನು ತೆಗೆದುಹಾಕಬೇಕು. ಹೀಗೆ ಮಾಡುವುದರಿಂದ ಎಲೆಗಳು ಚೆನ್ನಾಗಿ ಬೆಳೆಯುತ್ತವೆ.
ಪ್ರಭೇದಗಳು
[ಬದಲಾಯಿಸಿ]ಕಲೇಡಿಯಮಿನಲ್ಲಿ ಸುಮಾರು ೫೦ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಕ. ಅರ್ಜಿರೈಟಸ್, ಕ. ಬೈಕಲರ್, ಕ. ಮಾರ್ಮೊರೇಟಂ, ಕ. ಪಿಕ್ಚರೇಟಮ್, ಕ. ಹಂಬೋಲ್ಟಿಯೈ- ಮುಖ್ಯವಾದವು. (ಕೆ)
ಛಾಯಾಂಕಣ
[ಬದಲಾಯಿಸಿ]-
Caladium with white leaf with green veins at Courtallam
-
Plant canopy (Caladium bicolor 'Florida Sweetheart')
-
Leaf closeup (Caladium bicolor 'Florida Sweetheart')
-
Caladium bicolor 'Florida Red Ruffles'
-
Caladium Fannie Munson
-
Bedding of Caladium Florida Sweetheart
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Caladium on theplantlist.org
- Brochure on cultivation from the University of Florida Cooperative Extension Service Archived 2005-09-05 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedjkjkjjkkkjkj