Nothing Special   »   [go: up one dir, main page]

ವಿಷಯಕ್ಕೆ ಹೋಗು

ಕರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರು ಎಂದರೆ ಪಳಗಿಸಲಾದ ದನಗಳ ಮರಿ. ವಯಸ್ಕ ದನಗಳಾಗಲು ಕರುಗಳನ್ನು ಪಾಲಿಸಲಾಗುತ್ತದೆ/ಬೆಳೆಸಲಾಗುತ್ತದೆ, ಅಥವಾ ಅವುಗಳ ಮಾಂಸಕ್ಕಾಗಿ ಮತ್ತು ಅವುಗಳ ಚರ್ಮಕ್ಕಾಗಿ ಅವನ್ನು ವಧಿಸಲಾಗುತ್ತದೆ. ಕರುಗಳನ್ನು ಸಹಜ ರೀತಿಯಿಂದ ಉತ್ಪತ್ತಿಮಾಡಬಹುದು ಅಥವಾ ಕೃತಕ ಗರ್ಭಧಾರಣೆ ಅಥವಾ ಭ್ರೂಣ ವರ್ಗಾವಣೆಯನ್ನು ಬಳಸಿ ಕೃತಕ ಸಂತಾನೋತ್ಪತ್ತಿಯಿಂದ ಉತ್ಪತ್ತಿಮಾಡಬಹುದು.[] ಕರುಗಳು ಒಂಬತ್ತು ತಿಂಗಳ ಗರ್ಭಾವಸ್ಥೆಯ ನಂತರ ಹುಟ್ಟುತ್ತವೆ. ಜನನದ ಕೆಲವು ನಿಮಿಷಗಳೊಳಗೆ ಕರುಗಳು ಸಾಮಾನ್ಯವಾಗಿ ಎದ್ದುನಿಲ್ಲುತ್ತವೆ, ಮತ್ತು ಒಂದು ಗಂಟೆಯೊಳಗೆ ಮೊಲೆಯುಣ್ಣುತ್ತವೆ. ಆದರೆ, ಮೊದಲ ಕೆಲವು ದಿನಗಳವರೆಗೆ ಅವು ಸುಲಭವಾಗಿ ಹಿಂಡಿನ ಉಳಿದವುಗಳ ಜೊತೆಗೆ ಹೆಜ್ಜೆ ಜೋಡಿಸಲಾರವು, ಹಾಗಾಗಿ ಕರುಗಳನ್ನು ಹಲವುವೇಳೆ ತಾಯಿಹಸುವು ಅಡಗಿಸಿ ಇಡುತ್ತದೆ ಮತ್ತು ದಿನದಲ್ಲಿ ಹಲವು ಬಾರಿ ಮೊಲೆಯೂಡಿಸಲು ಭೇಟಿ ನೀಡುತ್ತದೆ. ಒಂದು ವಾರ ಆಗುವಷ್ಟರಲ್ಲಿ ಕರುವು ತಾಯಿಯನ್ನು ಎಲ್ಲ ಸಮಯದಲ್ಲೂ ಹಿಂಬಾಲಿಸುವಷ್ಟು ಸಮರ್ಥವಾಗಿರುತ್ತದೆ.

ಕೆಲವು ಕರುಗಳಿಗೆ ಜನನದ ಸ್ವಲ್ಪ ಸಮಯದಲ್ಲಿ ಕಿವಿಗೆ ಹೆಸರು ಪಟ್ಟಿಯನ್ನು ಕಟ್ಟಲಾಗುತ್ತದೆ, ವಿಶೇಷವಾಗಿ ಪಶುಸಂವರ್ಧನ ಕೇಂದ್ರದ ದನಗಳಿದ್ದರೆ. ಅವುಗಳ ತಾಯಿಯರನ್ನು ಸರಿಯಾಗಿ ಗುರುತಿಸಲು ಅಥವಾ ಹೆಸರು ಪಟ್ಟಿ ಗುರುತಿಸುವಿಕೆಯು ಕಾನೂನಾತ್ಮಕ ಅಗತ್ಯವಾಗಿರುವ ಪ್ರದೇಶಗಳಲ್ಲಿ (ಉದಾಹರಣೆಗೆ ಐರೋಪ್ಯ ಒಕ್ಕೂಟ) ಇದನ್ನು ಮಾಡಲಾಗುತ್ತದೆ. ಅದು ತನ್ನ ಗರಿಷ್ಠ ಸಾಮರ್ಥ್ಯವನ್ನು ಮುಟ್ಟಬೇಕಾದರೆ ಕರುವಿಗೆ ಕನಿಷ್ಠಪಕ್ಷ ಎಂಟು ತಿಂಗಳು ಆಗುವವರೆಗೆ ಬಹಳ ಅತ್ಯುತ್ತಮವಾದದ್ದು ಎಲ್ಲವೂ ಸಿಗಬೇಕು. ಸಾಮಾನ್ಯವಾಗಿ ಕರುಗಳಿಗೆ ಸುಮಾರು ಎರಡು ತಿಂಗಳಾದಾಗ, ಅವುಗಳಿಗೆ ಮುದ್ರೆ ಹಾಕಲಾಗುತ್ತದೆ, ಕಿವಿ ಗುರುತಿಸಲಾಗುತ್ತದೆ, ಬೀಜ ಒಡೆಯಲಾಗುತ್ತದೆ ಮತ್ತು ಲಸಿಕೆ ಹಾಕಲಾಗುತ್ತದೆ.

ಕರುಗಳನ್ನು ಪೋಷಿಸುವ ಏಕ ಮೊಲೆಯುಣಿಸುವ ಪದ್ಧತಿಯು ನೈಸರ್ಗಿಕವಾಗಿ ಕಾಡು ದನಗಳಲ್ಲಿ ಆಗುವುದನ್ನು ಹೋಲುತ್ತದೆ. ಅಂದರೆ ಅದಕ್ಕೆ ಸುಮಾರು ಒಂಬತ್ತು ತಿಂಗಳಿಗೆ ಮೊಲೆ ಹಾಲು ಕುಡಿಸುವುದನ್ನು ನಿಲ್ಲಿಸುವವರೆಗೆ ಪ್ರತಿ ಕರುವಿಗೆ ಅದರ ಸ್ವಂತ ತಾಯಿಯು ಮೊಲೆಯುಣಿಸುತ್ತದೆ. ವಿಶ್ವದಾದ್ಯಂತ ಮಾಂಸಕ್ಕಾಗಿ ದನಗಳನ್ನು ಬೆಳೆಸುವುದಕ್ಕಾಗಿ ಸಾಮಾನ್ಯವಾಗಿ ಈ ಪದ್ದತಿಯನ್ನು ಬಳಸಲಾಗುತ್ತದೆ. ಕಳಪೆ ಮೇವು ವ್ಯವಸ್ಥೆ ಇರುವಲ್ಲಿ ಇಡಲಾದ ಹಸುಗಳು (ಕೌಟುಂಬಿಕ ಕೃಷಿಯಲ್ಲಿ ಇದು ಸಾಮಾನ್ಯವಾಗಿರುತ್ತದೆ) ಸೀಮಿತ ಪ್ರಮಾಣದ ಹಾಲನ್ನು ಉತ್ಪಾದಿಸುತ್ತವೆ. ಅಂತಹ ತಾಯಿಯೊಂದಿಗೆ ಎಲ್ಲ ಸಮಯದಲ್ಲೂ ಬಿಡಲಾದ ಕರುವು ಸುಲಭವಾಗಿ ಎಲ್ಲ ಹಾಲನ್ನೂ ಕುಡಿದುಬಿಡಬಹುದು, ಮತ್ತು ಮಾನವ ಸೇವನೆಗಾಗಿ ಸ್ವಲ್ಪವೂ ಹಾಲು ಉಳಿಯುವುದಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. Friend, John B., Cattle of the World, Blandford Press, Dorset, 1978, ISBN 0-7137-0856-5
"https://kn.wikipedia.org/w/index.php?title=ಕರು&oldid=867358" ಇಂದ ಪಡೆಯಲ್ಪಟ್ಟಿದೆ