Nothing Special   »   [go: up one dir, main page]

ವಿಷಯಕ್ಕೆ ಹೋಗು

ಕಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಣಕ್‍ಪುರ್ ದೇವಸ್ಥಾನದ ಚಿತ್ರಾಲಂಕಾರಗಳನ್ನು ಹೊಂದಿದ ಅಮೃತಶಿಲೆ ಕಂಬಗಳು

ವಾಸ್ತುಶಾಸ್ತ್ರ ಮತ್ತು ರಾಚನಿಕ ಇಂಜಿನಿಯರಿಂಗ್‍ನಲ್ಲಿ ಕಂಬ ಸಂಕೋಚನದ ಮೂಲಕ ಅದರ ಮೇಲಿನ ರಚನೆಯ ಭಾರವನ್ನು ಕೆಳಗಿನ ಇತರ ರಾಚನಿಕ ಘಟಕಗಳಿಗೆ ಪ್ರಸರಿಸುವ ಒಂದು ರಾಚನಿಕ ಘಟಕ. ಅಂದರೆ, ಕಂಬವು ಒಂದು ಸಂಕೋಚನ ಸದಸ್ಯ. ಕಂಬವು ಸಾಮಾನ್ಯವಾಗಿ ಕಲ್ಲು, ಕಟ್ಟಿಗೆ ಅಥವಾ ಲೋಹದಿಂದ ಮಾಡಲ್ಪಟ್ಟಿರುತ್ತದೆ ಮತ್ತು ದುಂಡನೆಯ, ಆಯತಾಕಾರದ ಅಥವಾ ಇತರ ದುಂಡಗಿರದ ವಿಭಾಗವನ್ನು ಹೊಂದಿರುತ್ತದೆ. ಕಂಬಗಳನ್ನು ಆಗಾಗ್ಗೆ ಗೋಡೆಗಳ ಮೇಲಿನ ಭಾಗಗಳು ಅಥವಾ ಛಾವಣಿಗಳನ್ನು ಆಧರಿಸುವ ತೊಲೆಗಳು ಅಥವಾ ಕಮಾನುಗಳನ್ನು ಆಧರಿಸಲು ಬಳಸಲಾಗುತ್ತದೆ. ಕಂಬವು ಕೆಲವು ಪ್ರಮಾಣಾನುಗುಣ ಮತ್ತು ಅಲಂಕಾರಿಕ ಲಕ್ಷಣಗಳನ್ನೂ ಹೊಂದಿರಬಹುದು. ಕಂಬವು ರಾಚನಿಕ ಉದ್ದೇಶಗಳಿಗಿರದೇ ಒಂದು ಅಲಂಕಾರಿಕ ಘಟಕವಾಗಿರಬಹುದು; ಅನೇಕ ಕಂಬಗಳು ಒಂದು ಗೋಡೆಯ ಭಾಗವಾಗಿರುತ್ತವೆ.

ನಿಕಟಪೂರ್ವ ಮತ್ತು ಮೆಡಿಟರೇನಿಯನ್‍ನ ಎಲ್ಲ ಗಮನಾರ್ಹ ಕಬ್ಬಿಣ ಯುಗ ನಾಗರಿಕತೆಗಳು ಕಂಬಗಳ ಸ್ವಲ್ಪವಾದರೂ ಬಳಕೆ ಮಾಡಿದವು.

"https://kn.wikipedia.org/w/index.php?title=ಕಂಬ&oldid=727918" ಇಂದ ಪಡೆಯಲ್ಪಟ್ಟಿದೆ