Nothing Special   »   [go: up one dir, main page]

ವಿಷಯಕ್ಕೆ ಹೋಗು

ಅಬ್ಬೊಟ್ಟಾಬಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Abbottabad
(ಉರ್ದು: ایبٹ آباد)
Abbottabad
View of Abbottabad from Shimla Hill
View of Abbottabad from Shimla Hill
Countryಪಾಕಿಸ್ತಾನ ಪಾಕಿಸ್ತಾನ
ProvinceKhyber Pakhtunkhwa Khyber Pakhtunkhwa
DistrictAbbottabad
Founded1863
Elevation
೧,೨೫೬ m (೪,೧೨೧ ft)
Population
 • Total೧೪,೩೦,೨೩೮
Time zoneUTC+5 (PST)
Calling code0992
Number of Union Councils6[]
Websitehttp://www.abottabad.gov.pk
Abbottabad District Government
ಅಬ್ಬೊತ್ತಾಬಾದ್ ಜಿಲ್ಲೆ (ಕೆಂಪು ಹೈಲೈಟ್) ಪಾಕಿಸ್ತಾನದ ವಾಯುವ್ಯ ಗಡಿ ಪ್ರಾಂತ್ಯದಲ್ಲಿರುವ ಸ್ಥಳ.

ಅಬ್ಬೊಟ್ಟಾಬಾದ್ ಪಶ್ಚಿಮ ಪಾಕಿಸ್ತಾನದ ಪೆಷಾವರ್ ವಲಯದ ಹಜಾರಾ ಜಿಲ್ಲೆಯ ಒಂದು ನಗರ[]. ಹಜಾರಾದ ಪ್ರಥಮ ಡೆಪ್ಯುಟಿ ಕಮೀಷನರ್ ಸರ್ ಜೇಮ್ಸ್ ಆ್ಯಬಟ್‍ನ ಹೆಸರಿನಲ್ಲಿ ಈ ನಗರವನ್ನು ಸ್ಥಾಪಿಸಲಾಯಿತು[]. ವಾಯವ್ಯ ಸರಹದ್ದು ಪ್ರಾಂತಗಳ ಮುಖ್ಯ ಪ್ರದೇಶ. ಇದು ಕಂಟೋನ್‍ಮೆಂಟ್, ತಹಸೀಲು ಮತ್ತು ಜಿಲ್ಲಾ ಆಡಳಿತ ಕೇಂದ್ರ. ಸಮುದ್ರಮಟ್ಟದಿಂದ 4120` ಎತ್ತರದಲ್ಲಿದೆ[] ಯಾದ್ದರಿಂದ ಬೇಸಿಗೆ ಗಿರಿನಿವಾಸ ಮತ್ತು ಆರೋಗ್ಯ ಕೇಂದ್ರವಾಗಿವೆ. ಇಲ್ಲಿನ ಪರ್ವತಗಳು ಮಯೋಸಿನ್ ಶಿಲಾಸ್ತರಗಳ ಮರಳು ಶಿಲೆಗಳಿಂದಾಗಿವೆ. ಶುದ್ಧ ಲವಣಶಿಲೆ ಹಾಗೂ ಕಾಗೆಬಂಗಾರ (ಮೈಕ) ನಿಕ್ಷೇಪಗಳು ಇಲ್ಲಿ ದೊರಕಿವೆ. ಇಲ್ಲಿನ ಗಿರಿಜನ ಹೆಚ್ಚಾಗಿ ಬೇಸಾಯದಲ್ಲಿ ತೊಡಗಿದ್ದಾರೆ. ಗೋಧಿ, ಬಾರ್ಲಿ, ರೇಪ್ ಎಣ್ಣೆ ಬೀಜಗಳನ್ನು ಚಳಿಗಾಲದ ಬೆಳೆಗಳನ್ನಾಗೂ ಜೋಳ, ಸಜ್ಜೆಗಳನ್ನು ಬೇಸಿಗೆ ಬೆಳೆಗಳನ್ನಾಗೂ ಬೆಳೆಯುತ್ತಾರೆ. ಸಿಂಧೂ ಮತ್ತು ಕಿಷನ್‍ಗಂಗಾನದಿಗಳ ನಡುವಿನ ಮುಖ್ಯ ನಗರವಾಗಿರುವುದರಿಂದಲೂ ಆಕ್ರಮಿತ ಕಾಶ್ಮೀರ ವಿಭಾಗದ ಗಡಿಯಲ್ಲಿದ್ದು. ಮುಜಪ್ಫರಾಬಾದ್ ಮುಖಾಂತರ ಶ್ರೀನಗರಕ್ಕಿರುವ ಏಕಮಾತ್ರ ರಸ್ತೆ ಮಾರ್ಗದ ಮಧ್ಯದಲ್ಲಿರುವುದರಿಂದಲೂ ಈ ನಗರದ ಪ್ರಾಮುಖ್ಯ ಹೆಚ್ಚಿದೆ.

ಉಲ್ಲೇಖನಗಳು

[ಬದಲಾಯಿಸಿ]
  1. "URL accessed 5 April 2006". Nrb.gov.pk. 28 October 2005. Archived from the original on 15 ಏಪ್ರಿಲ್ 2012. Retrieved 28 January 2012.
  2. ೨.೦ ೨.೧ ೨.೨ http://pakistanmediaservice.blogspot.in/2012/08/history-of-abbottabad-hazara-major.html