Byalalu
This article needs translation from Kannada to English. This article is written in Kannada. If it is intended for readers from the Kannada language community, it should be contributed to the Kannada Wikipedia. See the list of Wikipedias. Please see this article's entry on Pages needing translation into English for discussion. If the article is not rewritten in English within the next two weeks it will be listed for deletion and/or moved to the Kannada Wikipedia. If you want to assess this article, you may want to check its Google translation. However, please do not add an automated translation to the article, since these are generally of very poor quality. |
Byalalu | |
---|---|
village | |
Country | India |
State | Karnataka |
District | Bangalore urban |
Government | |
• Young gun and Good cricketer | Ravi R S |
• President of Gowdru boys yuva sangha byalalu | Dinesh N |
Population (2011)[1] | |
• Total | 2,300 |
Languages | |
• Official | Kannada |
Time zone | UTC+5:30 (IST) |
'ಬ್ಯಾಲಾಳು ಗ್ರಾಮ:in Banagalore urbun district in Karnataka, India. It is an hour's drive from Bangalore city, off the Bangalore-Mysore highway.[2] The population was reported as 2,387 in the 2011 Indian census.[1]
ಬ್ಯಾಲಾಳು ಗ್ರಾಮ: ಬೆಂಗಳೂರು ನಗರ ಜಿಲ್ಲೆ ಕರ್ನಾಟಕರಾಜ್ಯ,ಭಾರತ ದೇಶದಲ್ಲಿದೆ, ಮೊದಲು ಈ ಗ್ರಾಮವು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿತ್ತು, ಕಾಲಾನಂತರ ಬೆಂಗಳೂರು ನಗರ ಜಿಲ್ಲೆಗೆ ಸೇರಿಸಲಾಗಿದೆ. ಇದು, ಬೆಂಗಳೂರು ಮೈಸೂರು ಹೆದ್ದಾರಿಯ ಸನಿಹದಲ್ಲಿದ್ದು, ಬೆಂಗಳೂರು ನಗರದಿಂದ ಕೇವಲ ಗಂಟೆಯ ಪ್ರಯಾಣದ ದೂರದಲ್ಲಿದೆ.ಭಾರತೀಯ ಜನಗಣತಿ 2011ರಲ್ಲಿ ಈ ಗ್ರಾಮದ ಜನಸಂಖ್ಯೆ 2387 ಎಂದು, 350 ಕ್ಕೂ ಹೆಚ್ಚು ಮನೆಗಳು, 5 ಹಿಂದೂ ದೇವಾಲಯಗಳು, 2 ಕೆರೆಗಳಿವೆ ಎಂದು ವರದಿಯಾಗಿತ್ತು.[1]
ಬ್ಯಾಲಾಳು ಗ್ರಾಮವು ತನ್ನ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗಿಂತ ಬಹಳ ಪುರಾತನ ಗ್ರಾಮವಾಗಿದ್ದು, ಇಡಿ ತಾವರೆಕೆರೆ ಹೋಬಳಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಸರಿಸುಮಾರು 900 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಗ್ರಾಮವು, ಕದಂಬರ, ಹೊಯ್ಸಳರ, ಚಾಲುಕ್ಯರ ಹಾಗೂ ಮೊಗಲರ ಆಳ್ವಿಕೆಯಲ್ಲಿತ್ತು ಎಂಬುದನ್ನು ಗ್ರಾಮದಲ್ಲಿರುವ ಪುರಾತನ ಶಿಲಾಶಾಸನಗಳು, ಪುರಾತನ ದೇವಾಲಯಗಳು, ಗರುಡ ಕಂಬಗಳು ಸಾರಿ ಸಾರಿ ಹೇಳುತ್ತವೆ. ಇಲ್ಲಿನ ಜನರ ಮುಖ್ಯ ಉದ್ಧೇಶ ವ್ಯವಸಾಯವಾಗಿತ್ತು. ಯಾವುದೇ ನದಿಗಳಾಗಲೀ, ಹೊಳೆಗಳು ಇಲ್ಲದಿರುವ ಈ ಗ್ರಾಮದಲ್ಲಿ, ರೈತರು ಮಳೆಯಾಧಾರಿತ ಬೇಸಾಯವನ್ನು ಮಾಡುತ್ತಿದ್ದು, ಊರಿನಲ್ಲಿರುವ ಬಾವಿಗಳು ಮತ್ತು ಕೆರೆಗಳನ್ನು ವ್ಯವಸಾಯಕ್ಕೆ ಬಳಸುತ್ತಾರೆ.
ತನ್ನದೆ ಆದ ಸಾಂಸ್ಕೃತಿಕ ಸೊಗಡನ್ನು ಹೊಂದಿರುವ ಈ ಗ್ರಾಮ, ಯಕ್ಷಗಾನ ಕಲಾವಿದರನ್ನು (ರಂಗಪ್ಪ) ನಾಟಕಕಾರರನ್ನು(ಸಿದ್ಧರಾಜು, ಮಾ. ರೇವಣ್ಣ, ಕೃಷ್ಣಮೂರ್ತಿ) ಹರಿಕಥೆ ದಾಸರುಗಳನ್ನು(ನಾಗರಾಜು ಬಿನ್ ಹೊಟ್ಟಪ್ಪ, ರೇವಣ್ಣ) ಹೊಂದಿದೆ. ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳಿಗಿತಲೂ ಈ ಗ್ರಾಮದಲ್ಲಿ ಊರಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಕಾಲಕ್ರಮೇಣ ಜಾತಿ ಕಲಹ, ಮುಖಂಡರ ವೈಮನಸ್ಯ, ನಗರೀಕರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ಗ್ರಾಮದ ಊರಹಬ್ಬವು ನಿಂತುಹೋಗಿದೆ. ಆದಾಗ್ಯೂ, ತಾವರೆಕೆರೆ ಹೋಬಳಿಯಲ್ಲಿಯೇ ಆದರ್ಶ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಬ್ಯಾಲಾಳು ಗ್ರಾಮವು, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಇನ್ನಿಲ್ಲದಂತೆ ಬೆಳೆದು ನಿಲ್ಲುವತ್ತ ದಾಪುಗಾಲಿಟ್ಟಿದೆ.
1947 ರ ಸ್ವತಂತ್ರ ಸಂಗ್ರಾಮವನ್ನು ಕಣ್ಣಾರೆ ಕಂಡ ಹಿರಿಯ ಮುತ್ಸದ್ಧಿಗಳು, ಗಾಂಧಿವಾದಿಗಳು, ಸ್ವತಂತ್ರ ಭಾರತದ ಗ್ರಾಮದ ಚುನಾಯಿತ ಹಿರಿಯ ಪ್ರತಿನಿಧಿಗಳು ಇಂದಿಗೂ ಈ ಗ್ರಾಮದಲ್ಲಿ ಕಾಣಸಿಗುತ್ತಾರೆ. ಅಂದಿನ ಕಾಲದಲ್ಲಿ ಕೆಂಪೇಗೌಡ ಮಾಗಡಿಯಿಂದ ಬೆಂಗಳೂರಿಗೆ ಸಂಚರಿಸುವಾಗ ಇದೇ ಊರಿನ ಹಳೇ ಆಲದಮರದ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದನೆಂದು, ಈ ಊರಿನ ಮೇಲಿನ ಪ್ರೀತಿಯಿಂದ ಒಂದು ಶಿಲಾಶಾಸನವನ್ನು ಕೆತ್ತಿಸಿದನೆಂದು ಹೇಳಲಾಗುತ್ತದೆ, ಈಗಲೂ ಆ ಹೇಳಿಕೆಗಳಿಗೆ ನಿಖರವಾದ ಸಾಕ್ಷ್ಯಾಧಾರಗಳು ಇಲ್ಲಿ ಕಾಣಸಿಗುತ್ತವೆ. ದೊಡ್ಡ ಆಲದಮರದಿಂದ ಕೂಗಳತೆ ದೂರದಲ್ಲಿರುವ ಬ್ಯಾಲಾಳು, ನಿಧಾನವಾಗಿ ಆಧುನೀಕರಣಕ್ಕೆ ತನ್ನನ್ನು ಒಗ್ಗಿಸಿಕೊಳ್ಳುತ್ತಿದೆ. Indian Space Research Organisation (ISRO) ಈ ಗ್ರಾಮಕ್ಕೆ ಸೇರಿರುವುದು ಈ ಗ್ರಾಮದ ವೈಶಿಷ್ಟ್ಯ, ಪಕ್ಕದಲ್ಲೇ ಇರುವ ಜನಪ್ರಿಯ ನಟ, ನಿರ್ದೇಶಕ ಉಪೇಂದ್ರ ರವರ ರುಪ್ಪೀಸ್ ರೆಸ್ಟೋರೆಂಟ್ ಈ ಗ್ರಾಮದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇಷ್ಟೆಲ್ಲಾ ಇದ್ದರೂ (ISRO) ಪಕ್ಕದಲ್ಲೇ ಇರುವ ಬ್ಯಾಲಾಳು ಗ್ರಾಮಕ್ಕೆ ಸೇರಿದ ಕೇಂದ್ರ ಸರ್ಕಾರದ ಮಹತ್ವಾಕಾಕ್ಷೆಯ ನವನಿರ್ಮಾಣ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಬ್ಯಾಲಾಳು ನವಗ್ರಾಮವನ್ನು, ಇನ್ನೂ ಕೂಡ ಅಭಿವೃದ್ಧಿಗೊಳಿಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಕುರಿತು The Times of India ಪತ್ರಿಕೆಯು ತನ್ನ ಅಂಕಣದಲ್ಲಿ ಬೆಳಕು ಚೆಲ್ಲಿತ್ತು.
ಈ ಗ್ರಾಮದಲ್ಲಿ, B.ಜಯರಾಮ್, N.ನಾರಾಯಣಪ್ಪ, ರಾಮಯ್ಯ, ರೇವಣ್ಣಸಿದ್ದಯ್ಯ, ಮಧುರ ಹಾಗೂ ರಮೇಶ್ ರವರು, ಹೋಬಳಿಯಲ್ಲಿಯೇ ಹೆಚ್ಚು ಜನಪ್ರಿಯ ವ್ಯಕ್ತಿಗಳು. ಸದ್ಯದ ಪರಿಸ್ಥಿತಿಯಲ್ಲಿ (ಅಂದರೆ 15.11.2012 ರ ಆಸುಪಾಸಿನಲ್ಲಿ) ಬ್ಯಾಲಾಳು ಗ್ರಾಮ ರಾಜಕೀಯದಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ವ್ಯವಸಾಯದಲ್ಲಿ ತನ್ನ ಇಚ್ಛಾಶಕ್ತಿಯನ್ನು ಕಳೆದುಕೊಂಡಿದೆ. ಕಾರಣ, ಹಿರಿಯರ ವೈಮನಸ್ಯ, ಜಾತಿಕಲಹ, ರಾಜಕೀಯ ಅಸ್ಥಿರತೆ ರಿಯಲ್ ಎಸ್ಟೇಟ್ ದಂಧೆ ಹಾಗೂ ಗ್ರಾಮದಲ್ಲಿರುವ ಇತ್ತೀಚಿನ ಮುಖಂಡರುಗಳ ರಾಜಕೀಯ ದೌರ್ಬಲ್ಯಗಳು. ಹಾಗಿದ್ದರೂ N.ನಾರಾಯಣಪ್ಪ ಹಾಗೂ ರಾಮಯ್ಯ ಮುಂದಿನ ದಿನಗಳಲ್ಲಿ ಗ್ರಾಮದ ಆಶಾಕಿರಣಗಳಾಗಿ ಹೊರಹೊಮ್ಮಿದ್ದಾರೆ. ಇಷ್ಟೇ ಅಲ್ಲದೇ ಈ ಗ್ರಾಮದಲ್ಲಿ ಸುಮಾರು 150 ಕ್ಕೀ ಹೆಚ್ಚು ಯುವ ಪಡೆಯೇ ಇವರ ಬೆನ್ನೆಲುಬಾಗಿ ನಿಂತಿದೆ.
ಗೌಡ್ರು ಬಾಯ್ಯ್ ಯುವಕರ ಸಂಘವನ್ನು ಕಟ್ಟಿಕೊಂಡಿರುವ ಈ ಯುವ ಬಳಗ, ತಾವರೆಕೆರೆ, ಕೆಂಗೇರಿ, ಮಾಗಡಿ ಹಾಗೂ ಮಂಚನಬೆಲೆಯ ಸುತ್ತಲೂ, ರಾಜಕೀಯ ಹಾಗೂ ಕ್ರೀಡೆಯಲ್ಲಿ , ಸಾಮಾಜಿಕ ಸೇವೆಗಳ ಮುಖಾಂತರ ಯುವ ನಕ್ಷತ್ರಗಳ ತಾರಾ ಮಂಡಲದಂತೆ ಕಂಗೊಳಿಸುತ್ತಿದೆ. ದಿನೇಶ್.ಎನ್, ರವಿ ಅರಸ್, ಸತೀಶ್.ಆರ್, ಶಶಿ.ಎನ್, ಮುತ್ತುರಾಜ್.ಬಿ.ಎಮ್, ನಾಗರಾಜು.ಎನ್,ವಿಜಯ್, ಕುಮಾರ್, ರಮೇಶ್, ಪ್ರಕಾಶ್, ನವೀನ್,ಧನಂಜಯ, ಚಂದ್ರು, ಮಂಜುನಾಥ್, ದೇವರಾಜ್, ನಂತಹ ದೊಡ್ಡ ಯುವ ಪಡೆಯೇ ಈ ಗ್ರಾಮದಲ್ಲಿದೆ. ದಿನೇಶ್ ಗೌಡ್ರು ಬಾಯ್ಸ್ ಅಧ್ಯಕ್ಷರಾದರೆ, ರವಿ ಅರಸ್ ಸುತ್ತಮುತ್ತಲಿನ ಅಪ್ರತಿಮ ಕ್ರಿಕೆಟಿಗರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಯುವಕ. ಇವರೆಲ್ಲರೂ ಮುಂದೊಂದು ದಿನ ಈ ಗ್ರಾಮದ ಬೆನ್ನೆಲೆಬಾಗಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಿಷ್ಟು, ಇಲ್ಲಿಯವರೆಗಿನ ಈ ಗ್ರಾಮದ ಬಗ್ಗೆ ನನಗೆ ತಿಳಿದಿರುವ ಮಾಹಿತಿ. ಮುಂದಿನ ನವೀಕರಣ 2.2.12. ಧನ್ಯವಾದಗಳು.
References
- ^ a b c "Byalalu Village. OurVillageIndia.com. Retrieved on 7 November 2008.
- ^ Srinivas Laxman; TNN (18 May 2006). "Byalalu set to rocket to fame", The Times of India. Retrieved on 7 November 2008.